ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗ್ಪುರ: 15ರಿಂದ ಆರ್‌ಎಸ್ಎಸ್ ಸಮಾವೇಶ

ರಾಮಮಂದಿರದ ಬಗ್ಗೆ ಗೊತ್ತುವಳಿ ಸೇರಿ ದೇಶದ ಹಲವು ವಿಚಾರಗಳ ಚರ್ಚೆ
Published 13 ಮಾರ್ಚ್ 2024, 14:40 IST
Last Updated 13 ಮಾರ್ಚ್ 2024, 14:40 IST
ಅಕ್ಷರ ಗಾತ್ರ

ನಾಗ್ಪುರ: ನಾಗ್ಪುರದ ‘ಸ್ಮೃತಿ ಭವನ’ದಲ್ಲಿ ಇದೇ 15ರಿಂದ 17ರವರೆಗೆ ಮೂರು ದಿನಗಳ ಕಾಲ ಆರ್‌ಎಸ್ಎಸ್ ನಾಯಕತ್ವದ ಬಹುಮುಖ್ಯವಾದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಆರ್‌ಎಸ್ಎಸ್‌ನ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್ ಬುಧವಾರ ತಿಳಿಸಿದ್ದಾರೆ. 

ಈ ಸಮಾವೇಶದಲ್ಲಿ ರಾಮಮಂದಿರ ಕುರಿತು ಗೊತ್ತುವಳಿ ಅಂಗೀಕಾರ ಹಾಗೂ ದೇಶದ ಹಲವು ವಿಚಾರಗಳ ಕುರಿತು ಚರ್ಚಿಸಲಾಗುವುದು. ಆರ್‌ಎಸ್ಎಸ್‌ನೊಂದಿಗೆ ನಂಟು ಹೊಂದಿರುವ ಸಂಘಟನೆಗಳ 1,529 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಂಬೇಕರ್, ‘ನಾಗ್ಪುರದಲ್ಲಿ ಆರು ವರ್ಷಗಳ ಬಳಿಕ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತಿದೆ. 2025ರ ವೇಳೆಗೆ ಆರ್‌ಎಸ್ಎಸ್ ಸಂಘಟನೆಗೆ 100 ವರ್ಷ ಪೂರ್ಣವಾಗಲಿದೆ. ಆ ಸಂದರ್ಭದಲ್ಲಿ ದೇಶದಾದ್ಯಂತ 68 ಸಾವಿರ ಇರುವ ಆರ್‌ಎಸ್ಎಸ್ ಸಂಘದ ಶಾಖೆಗಳ ಸಂಖ್ಯೆಯನ್ನು ಒಂದು ಲಕ್ಷಕ್ಕೆ ಏರಿಸಬೇಕು ಎನ್ನುವುದೂ ಸೇರಿದಂತೆ 2024–25ರ ಅವಧಿಯಲ್ಲಿ ಏನೆಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂಬ ಬಗ್ಗೆ ಚರ್ಚಿಸಲಾಗುವುದು’ ಎಂದು ಹೇಳಿದ್ದಾರೆ. 

ಸಂಘದ ಅಖಿಲ ಭಾರತೀಯ ಕಾರ್ಯಕಾರಣಿ ಮಂಡಳಿಯಿಂದ ಚುನಾವಣೆಗೆ ಸದಸ್ಯರನ್ನು ಆಯ್ಕೆ ಮಾಡುವುದು ಮತ್ತು ಪ್ರಧಾನ ಕಾರ್ಯದರ್ಶಿಗಳ ಕುರಿತು ಚರ್ಚೆಯಾಗಲಿದೆ. 2023–24ರ ಅವಧಿಯಲ್ಲಿ ಸಂಘ ಮಾಡಿದ ಎಲ್ಲಾ ಕಾರ್ಯಗಳು ಮತ್ತು ಸೇವಾ ಕಾರ್ಯಗಳನ್ನು ವಿಮರ್ಶೆಗೊಳಪಡಿಸಲಾಗುವುದು ಎಂದಿದ್ದಾರೆ. 

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, 36 ಸಂಘಗಳ ಕಾರ್ಯದರ್ಶಿಗಳು ಮತ್ತು ಮುಖ್ಯಸ್ಥರು ಈ ಪ್ರತಿನಿಧಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT