ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾಳ್‌ನ ಪ್ರತಾಪ್ ಪವಾರ್‌ ಎಬಿಸಿ ಅಧ್ಯಕ್ಷ

Last Updated 15 ಸೆಪ್ಟೆಂಬರ್ 2022, 16:38 IST
ಅಕ್ಷರ ಗಾತ್ರ

ಬೆಂಗಳೂರು: ಆಡಿಟ್‌ ಬ್ಯೂರೊ ಆಫ್‌ ಸರ್ಕ್ಯುಲೇಶನ್‌ (ಎಬಿಸಿ) ಸಂಸ್ಥೆಯ 2022–23ನೇ ಸಾಲಿನ ಅಧ್ಯಕ್ಷರಾಗಿ ಸಕಾಳ್ ಮೀಡಿಯಾ ಪ್ರೈ. ಲಿಮಿಟೆಡ್‌ನ ಮುಖ್ಯಸ್ಥರಾದ ಪ್ರತಾಪ್ ಪವಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಕಾಳ್‌ಮೀಡಿಯಾ ಪ್ರೈ. ಲಿಮಿಟೆಡ್‌ ಮರಾಠಿ ದಿನಪತ್ರಿಕೆ ಸಕಾಳ್‌ನ ಪ್ರಕಾಶನ ಸಂಸ್ಥೆಯಾಗಿದೆ. ಪ್ರತಾಪ್ ಪವಾರ್ ಅವರು ಪುಣೆಯ ಎಂಸಿಸಿಐಎ ಅಧ್ಯಕ್ಷರಾಗಿ, ರಾಷ್ಟ್ರಮಟ್ಟದ ಮತ್ತು ಅಂತರರಾಷ್ಟ್ರೀಯ ಮಟ್ಟದ ಹಲವು ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಪವಾರ್ ಅವರು ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ.

ಜಾಹೀರಾತು ಸಂಸ್ಥೆ ಆರ್‌ಕೆ ಸ್ವಾಮಿ ಪ್ರೈ.ಲಿಮಿಟೆಡ್‌ನ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್ ಕೆ.ಸ್ವಾಮಿ ಅವರು ಎಬಿಸಿಯ ಉಪಾಧ್ಯಕ್ಷರಾಗಿ,ಹೊರ್ಮುಜ್ದ್‌ ಮಸಾನಿ ಪ್ರಧಾನ ಕಾರ್ಯದರ್ಶಿಯಾಗಿ, ಮಲಯಾಳ ಮನೋರಮಾ ಕಂಪನಿ ಲಿಮಿಟೆಡ್‌ನ ರಿಯಾದ್ ಮ್ಯಾಥ್ಯೂ ಗೌರವ ಕಾರ್ಯದರ್ಶಿಯಾಗಿ ಮತ್ತುಮ್ಯಾಡಿಸನ್‌ ಕಮ್ಯುನಿಕೇಷನ್ಸ್‌ ಪ್ರೈ. ಲಿಮಿಟೆಡ್‌ನ ವಿಕ್ರಂ ಸಖುಜಾ ಅವರು ಗೌರವ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.

ಎಬಿಸಿಯ ಆಡಳಿತ ಮಂಡಳಿ ಸದಸ್ಯರ ವಿವರ ಇಂತಿದೆ: ಪ್ರಕಾಶಕರ ಪ್ರತಿನಿಧಿಗಳಾಗಿ ದಿ ಬಾಂಬೆ ಸಮಾಚಾರ್ ಪ್ರೈ. ಲಿಮಿಟೆಡ್‌ನ ಹೊರ್ಮುಸ್‌ಜಿ ಎನ್‌.ಕಾಮಾ, ಜಾಗರಣ್ ಪ್ರಕಾಶನ್‌ ಲಿಮಿಟೆಡ್‌ನ ಶೈಲೇಶ್ ಗುಪ್ತಾ, ಎಚ್‌ಟಿ ಮೀಡಿಯಾ ಲಿಮಿಟೆಡ್‌ನ ಪ್ರವೀಣ್‌ ಸೋಮೇಶ್ವರ್, ಬೆನ್ನೆತ್ ಕೋಲ್ಮನ್‌ ಅಂಡ್‌ ಕಂಪನಿ ಲಿಮಿಟೆಡ್‌ನ ಮೋಹಿತ್ ಜೈನ್‌, ಎಬಿಪಿ ಪ್ರೈ.ಲಿಮಿಟೆಡ್‌ನ ಧ್ರುವ ಮುಖರ್ಜಿ, ಲೋಕಮತ್ ಮೀಡಿಯಾ ಲಿಮಿಟೆಡ್‌ನ ಕರಣ್‌ ದಾರ್ದ ಆಯ್ಕೆಯಾಗಿದ್ದಾರೆ.

ಜಾಹೀರಾತು ಸಂಸ್ಥೆಗಳ ಪ್ರತಿನಿಧಿಗಳಾಗಿ ಐಪಿಜಿ ಮೀಡಿಯಾ ಬ್ರ್ಯಾಂಡ್ಸ್‌–ಮೀಡಿಯಾ ಬ್ರ್ಯಾಂಡ್ಸ್‌ ಪ್ರೈ.ಲಿಮಿಟೆಡ್‌ನ ಶಶಿಧರ್ ಸಿನ್ಹಾ, ಗ್ರೂಪ್‌ ಎಂ ಮೀಡಿಯಾ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಪ್ರಶಾಂತ್ ಕುಮಾರ್‌ ಆಯ್ಕೆಯಾಗಿದ್ದಾರೆ.ಜಾಹೀರಾತುದಾರರ ಪ್ರತಿನಿಧಿಗಳಾಗಿ ಯುನೈಟೆಡ್ ಬ್ರೆವರೀಸ್‌ ಲಿಮಿಟೆಡ್‌ನದೇವವ್ರತ ಮುಖರ್ಜಿ, ಐಟಿಸಿ ಲಿಮಿಟೆಡ್‌ನ ಕರುಣೇಶ್ ಬಜಾಜ್‌, ಟಿವಿಎಸ್‌ ಮೋಟರ್‌ ಕಂಪನಿ ಲಿಮಿಟೆಡ್‌ನ ಅನಿರುದ್ಧ ಹಲ್ದಾರ್‌, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನಶಶಾಂಕ್ ಶ್ರೀವಾಸ್ತವ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT