ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶದ ಮೊದಲ ಸೋಲಾರ್‌ ಸಿಟಿಯಾಗುವತ್ತ ಅಯೋಧ್ಯೆ

ಅಯೋಧ್ಯಾ ನಗರಿಗೆ ಸೌರ ವಿದ್ಯುತ್ ಶಕ್ತಿ.
Published 8 ಅಕ್ಟೋಬರ್ 2023, 9:30 IST
Last Updated 8 ಅಕ್ಟೋಬರ್ 2023, 9:30 IST
ಅಕ್ಷರ ಗಾತ್ರ

ಅಯೋಧ್ಯೆ (ಉತ್ತರ ಪ್ರದೇಶ): ರಾಮ ಮಂ‌ದಿರದ ಉದ್ಘಾಟನೆಗೂ ಮುನ್ನ ಅಯೋಧ್ಯೆಯನ್ನು ರಾಜ್ಯದ ಮೊದಲ 'ಸೌರ ನಗರ'ವಾಗಿ ಅಭಿವೃದ್ಧಿಪಡಿಸಲು ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ. ಉತ್ತರ ಪ್ರದೇಶ ನವೀಕರಿಸಬಹುದಾದ ಇಂಧನ ಇಲಾಖೆ (UPNEDA) ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಖುದ್ದು ವೀಕ್ಷಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ಕಾಮಗಾರಿಯನ್ನು ಪರಿಶೀಲಿಸಿದ ಸಿಎಂ,'ಅಯೋಧ್ಯೆ ಸೂರ್ಯವಂಶದ ರಾಜಧಾನಿ. ಆದ್ದರಿಂದ, ಇಲ್ಲಿ ವಿದ್ಯುತ್ ಬೇರೆ ಮೂಲಗಳಿಂದ ಬರುವುದಿಲ್ಲ. ಆದರೆ, ನವೀಕರಿಸಬಹುದಾದ ಸೌರಶಕ್ತಿಯಿಂದ ಬರುತ್ತದೆ' ಎಂದು ಹೇಳಿದ್ದರು.

ಈ ಯೋಜನೆಯು ಉತ್ತರ ಪ್ರದೇಶದ ಮಹತ್ವಾಕಾಂಕ್ಷೆಯ ಸೌರ ಶಕ್ತಿ ನೀತಿ 2022ರ ಭಾಗವಾಗಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಯೋಜನೆಯ ಪ್ರಮುಖ ಅಂಶವೆಂದರೆ 16 ಮುನ್ಸಿಪಲ್ ಕಾರ್ಪೊರೇಶನ್‌ಗಳು ಮತ್ತು ನೋಯ್ಡಾವನ್ನು ಸೌರ ನಗರಗಳಾಗಿ ಅಭಿವೃದ್ಧಿಪಡಿಸುವುದಾಗಿದೆ. ಅಯೋಧ್ಯೆಯಲ್ಲಿ ನಡೆಯುತ್ತಿರುವ ಬಹುತೇಕ ಯೋಜನೆಗಳು ಜನವರಿ ವೇಳೆಗೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಯುಪಿಎನ್‌ಇಡಿಎ ನಿರ್ದೇಶಕ ಅನುಪಮ್ ಶುಕ್ಲಾ ಪಿಟಿಐಗೆ ತಿಳಿಸಿದ್ದಾರೆ.

ಸರಯೂ ನದಿ ತೀರದಲ್ಲಿ 40 ಮೆಗಾವ್ಯಾಟ್ ಸೌರ ಸ್ಥಾವರವನ್ನು ಸ್ಥಾಪಿಸುವುದು ಯೋಜನೆಯ ಪ್ರಮುಖಾಂಶವಾಗಿದೆ. ಜನವರಿ ವೇಳೆಗೆ ಯೋಜನೆಯ 10 ಮೆಗಾವ್ಯಾಟ್ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಯೋಜನೆಗೆ ಭೂಮಿಯನ್ನು ಗುರುತಿಸಲಾಗಿದ್ದು, ಕಾಮಗಾರಿ ನಡೆಯುತ್ತಿದೆ ಎಂದು ಯುಪಿಎನ್‌ಇಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ಸೌರ ನಗರ ಎಂದರೆ?:

ಸೌರಶಕ್ತಿ ನೀತಿಯ ಪ್ರಕಾರ, ನವೀಕರಿಸಬಹುದಾದ ಶಕ್ತಿಯ ಮೂಲಕ 10 ಪ್ರತಿಶತದಷ್ಟು ವಿದ್ಯುತ್ ಬೇಡಿಕೆಯನ್ನು ಪೂರೈಸುವ ಯಾವುದೇ ನಗರವನ್ನು ಸೌರ ನಗರವೆಂದು ಪರಿಗಣಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT