ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೊರೇನ್‌ ಬಂಧನ ಬಿಜೆಪಿ ಬುಡಕಟ್ಟು ವಿರೋಧಿ ಮನಸ್ಥಿತಿ ತೋರುತ್ತದೆ: ಎಎಪಿ

Published 1 ಫೆಬ್ರುವರಿ 2024, 16:12 IST
Last Updated 1 ಫೆಬ್ರುವರಿ 2024, 16:12 IST
ಅಕ್ಷರ ಗಾತ್ರ

ನವದೆಹಲಿ: ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹಾಗೂ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿರುವುದು ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರದ ‘ಬುಡಕಟ್ಟು ವಿರೋಧಿ’ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ಗುರುವಾರ ಆರೋಪಿಸಿದೆ.

‘ಲೋಕಸಭೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ವಿರೋಧ ಪಕ್ಷಗಳ ಮೇಲಿನ ದಾಳಿಯನ್ನು ತೀವ್ರಗೊಳಿಸುವ ಉದ್ದೇಶದಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸೊರೇನ್‌ ಅವರನ್ನು ಬಂಧಿಸಿದೆ. ಮುಂದಿನ ತಿಂಗಳು ವಿಪಕ್ಷಗಳ ಇನ್ನೂ ಹಲವು ನಾಯಕರನ್ನು ಬಂಧಿಸುವುದು ಖಾತ್ರಿ’ ಎಂದು ದೆಹಲಿ ಸಚಿವೆ ಹಾಗೂ ಪಕ್ಷದ ನಾಯಕ ಆತಿಶಿ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಬಿಜೆಪಿಗೆ ತಲೆಬಾಗದ ಮುಖಂಡರನ್ನೆಲ್ಲ ಜೈಲಿಗೆ ಅಟ್ಟಲಾಗುತ್ತದೆ’ ಎಂದು ಎಎಪಿಯ ಮತ್ತೊಬ್ಬ ಮುಖಂಡ ಹಾಗೂ ಸಚಿವ ಸೌರಭ್‌ ಭಾರದ್ವಾಜ್‌ ಆರೋಪಿಸಿದ್ದಾರೆ.

‘ಬಿಜೆಪಿ ಯಾರನ್ನೆಲ್ಲಾ ಭ್ರಷ್ಟರು ಎಂದು ಕರೆದಿತ್ತೋ ಅವರೆಲ್ಲ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಇಲ್ಲವೇ ಉಪಮುಖ್ಯಮಂತ್ರಿಗಳು ಹಾಗೂ ಸಚಿವರಾಗಿದ್ದಾರೆ. ಹಿಮಂತ ಬಿಸ್ವ ಶರ್ಮ, ಅಜಿತ್‌ ಪವಾರ್, ನಾರಾಯಣ ರಾಣೆ, ಸುವೇಂದು ಅಧಿಕಾರಿ, ಛಗನ್‌ ಭುಜಬಲ, ಪೆಮಾ ಖಂಡು ಇದಕ್ಕೆ ನಿದರ್ಶನ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT