ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

J-K assembly polls: 10 ಅಭ್ಯರ್ಥಿಗಳ 6ನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

Published : 8 ಸೆಪ್ಟೆಂಬರ್ 2024, 10:49 IST
Last Updated : 8 ಸೆಪ್ಟೆಂಬರ್ 2024, 10:49 IST
ಫಾಲೋ ಮಾಡಿ
Comments

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗೆ 10 ಅಭ್ಯರ್ಥಿಗಳ 6ನೇ ಪಟ್ಟಿಯನ್ನು ಬಿಜೆಪಿ ಭಾನುವಾರ ಬಿಡುಗಡೆ ಮಾಡಿದೆ.

ಉಧಮ್‌ಪುರ ಪೂರ್ವದಿಂದ ಆರ್‌.ಎಸ್ ಪಠಾನಿಯಾ, ಬಂಡಿಪೋರಾದಿಂದ ನಸೀರ್ ಅಹ್ಮದ್ ಲೋನ್ ಅವರನ್ನು ಕಣಕ್ಕಿಳಿಸಿದೆ.

ಫಕೀರ್ ಮೊಹಮ್ಮದ್ ಖಾನ್ ಗುರೇಜ್ (ಪರಿಶಿಷ್ಟ ಪಂಗಡ) ಮೀಸಲು ಕ್ಷೇತ್ರದಿಂದ, ಅಬ್ದುಲ್ ರಶೀದ್ ಖಾನ್ ಸೋನಾವರಿಯಿಂದ ಹಾಗೂ ಗುಲಾಮ್ ಮೊಹಮ್ಮದ್ ಮಿರ್ ಹಂದ್ವಾರದಿಂದ ಸ್ಪರ್ಧಿಸಲಿದ್ದಾರೆ.

ಕಠುವಾದಿಂದ ಭಾರತ್ ಭೂಷಣ್, ಬಿಷ್ನಾದಿಂದ ರಾಜೀವ್ ಭಗತ್ ಮತ್ತು ಮಾರ್ಹ್‌ನಿಂದ ಸುರೀಂದರ್ ಭಗತ್ ಸ್ಪರ್ಧಿಸಲಿದ್ದಾರೆ. ಈ ಮೂರು ವಿಧಾನಸಭಾ ಸ್ಥಾನಗಳು ಪರಿಶಿಷ್ಟ ಜಾತಿಗೆ (SC) ಮೀಸಲಾಗಿದೆ. ಬಹು ವಿಧಾನಸಭಾ ಕ್ಷೇತ್ರದಿಂದ ವಿಕ್ರಮ್ ರಾಂಧವಾ ಅವರನ್ನು ಕಣಕ್ಕಿಳಿಸಿದೆ.

90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಮೂರು ಹಂತದಲ್ಲಿ ಚುನಾವಣೆ ನಡೆಯಲಿದೆ. ಸೆಪ್ಟೆಂಬರ್ 18ರಂದು ಮೊದಲ ಹಂತ, ಸೆಪ್ಟೆಂಬರ್ 25ರಂದು 2ನೇ ಹಂತ ಮತ್ತು ಅಕ್ಟೋಬರ್ 1ರಂದು 3 ಮತ್ತು ಕೊನೆಯ ಹಂತದ ಚುನಾವಣೆ ನಡೆಯಲಿದೆ. ಅಕ್ಟೋಬರ್ 4 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT