ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರವಾದಿಗಳ ಹತ್ಯೆ ತನಿಖೆಯ ಲೋಪ ಎತ್ತಿತೋರಿಸುವ ಕೃತಿ ಬಿಡುಗಡೆ

Published 30 ಏಪ್ರಿಲ್ 2023, 22:21 IST
Last Updated 30 ಏಪ್ರಿಲ್ 2023, 22:21 IST
ಅಕ್ಷರ ಗಾತ್ರ

ಮುಂಬೈ: ಪ್ರೊ.ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್‌ ಸೇರಿ ನಾಲ್ವರು ವಿಚಾರವಾದಿಗಳ ಹತ್ಯೆಗಳ ತನಿಖೆಯಲ್ಲಿನ ಗಂಭೀರ ಅಸಮಂಜಸತೆಗಳು ಮತ್ತು ಸಮಸ್ಯೆಗಳನ್ನು ಎತ್ತಿತೋರಿಸುವ ‘ದಿ ರ‍್ಯಾಷನಲಿಸ್ಟ್‌ ಮರ್ಡರ್ಸ್‌ ’ (ವಿಚಾರವಾದಿಗಳ ಕೊಲೆಗಳು) ಕೃತಿಯನ್ನು ಶನಿವಾರ ಇಲ್ಲಿ ಬಿಡುಗಡೆ ಮಾಡಲಾಗಿದೆ.

ಕನ್ನಡದ ಲೇಖಕ, ವಿಚಾರವಾದಿ ಪ್ರೊ.ಎಂ.ಎಂ. ಕಲಬುರ್ಗಿ, ಡಾ.ನರೇಂದ್ರ ದಾಭೋಲ್ಕರ್‌, ಕಮ್ಯುನಿಸ್ಟ್‌ ನಾಯಕ ಗೋವಿಂದ ಪನ್ಸಾರೆ, ಪತ್ರಕರ್ತೆ ಗೌರಿಲಂಕೇಶ್‌ ಅವರ ಹತ್ಯೆಗಳ ತನಿಖೆಯ ಲೋಪಗಳ ಬಗ್ಗೆ ಈ ಕೃತಿ ಹಲವು ಪ್ರಶ್ನೆಗಳನ್ನು ಎತ್ತಿದೆ. 

ಡಾ. ಅಮಿತ್ ಥಡಾನಿ ಬರೆದಿರುವ ‘ದಿ ರ‍್ಯಾಷನಲಿಸ್ಟ್‌ ಮರ್ಡರ್ಸ್‌: ಡೈರಿ ಆಫ್ ರುಯಿನ್ಡ್‌ ಇನ್ವೆಸ್ಟಿಗೇಷನ್‌’ ಪುಸ್ತಕವನ್ನು ಶನಿವಾರ ಮುಂಬೈನ ಸಿಯಾನ್‌ನ ಷಣ್ಮುಖಾನಂದ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಗಿದೆ.

‘ಹತ್ಯೆ ಆರೋಪಿಗಳ ವಿಚಾರಣೆಗಳನ್ನು ವಿಳಂಬಗೊಳಿಸಲು ತನಿಖಾ ಸಂಸ್ಥೆಗಳು ಯತ್ನಿಸಿವೆ. ಲೋಪಗಳ ಬಗ್ಗೆ ಬೆಳಕು ಚೆಲ್ಲುವ ವಿವಿಧ ಸರ್ಕಾರಿ ಏಜೆನ್ಸಿಗಳ ವರದಿಗಳು, ದಿನಪತ್ರಿಕೆಗಳ ಲೇಖನಗಳು ಮತ್ತು ಹತ್ತಾರು ಸಾವಿರ ಪುಟಗಳ ಚಾರ್ಜ್‌ಶೀಟ್‌ಗಳನ್ನು ನೋಡಿರುವೆ. ಈ ನಾಲ್ಕು ಹತ್ಯೆ ಪ್ರಕರಣಗಳು ಪರಸ್ಪರ ನಂಟು ಹೊಂದಿವೆ ಎಂದು ತನಿಖಾ ಸಂಸ್ಥೆಗಳು  ತರಾತುರಿಯಲ್ಲಿ ಬಿಂಬಿಸಿ, ನಾಲ್ಕೂ ಪ್ರಕರಣಗಳ ತನಿಖೆಗಳನ್ನೂ ತೀರಾ ದುರ್ಬಲಗೊಳಿಸಿ ಕೊನೆಗೊಳಿಸಿವೆ’ ಎಂದು ಡಾ.ಥಡಾನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT