ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Burger King murder | ಹತ್ಯೆ ಪ್ರಕರಣ: ಓರ್ವನ ಬಂಧನ

Published 28 ಜೂನ್ 2024, 11:21 IST
Last Updated 28 ಜೂನ್ 2024, 11:21 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್‌ನ ಆಹಾರ ಮಳಿಗೆಯಲ್ಲಿ ನಡೆದಿದ್ದ ವ್ಯಕ್ತಿಯ ಹತ್ಯೆಗೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. 

ಬಂಧಿತ ಆರೋಪಿಯು ಹತ್ಯೆ ನಡೆಸಲು ಇಬ್ಬರು ಶೂಟರ್‌ಗಳನ್ನು ತನ್ನ ವಾಹನದಲ್ಲಿ ಸ್ಥಳಕ್ಕೆ ಕರೆತಂದಿದ್ದ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದು, ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂದಿದ್ದಾರೆ.

ರಜೌರಿ ಗಾರ್ಡನ್‌ನ ಬರ್ಗರ್‌ ಕಿಂಗ್‌ ಆಹಾರ ಮಳಿಗೆಯಲ್ಲಿ ಮಹಿಳೆಯೊಬ್ಬರೊಂದಿಗೆ ಕುಳಿತಿದ್ದಾಗ ಹರಿಯಾಣ ಮೂಲದ ಅಮನ್‌ ಜೂನ್‌ ಎಂಬುವವರನ್ನು ಜೂನ್‌ 18ರಂದು ಇಬ್ಬರು ಆಗಂತುಕರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಮೃತ ವ್ಯಕ್ತಿಗೆ 38 ಗುಂಡೇಟುಗಳು ತಗುಲಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ಗಳಾದ ನೀರಜ್‌ ಬವಾನ್‌ ಮತ್ತು ಅಶೋಕ್‌ ಪ್ರಧಾನ್‌ ನಡುವಿನ ಗುಂಪು ಘರ್ಷಣೆ ಅಮನ್‌ ಕೊಲೆಗೆ ಕಾರಣ ಎನ್ನಲಾಗಿದೆ.

ಕೊಲೆಗೆ ಕಾರಣರಾದ ಇತರೆ ಮೂವರು ಶಂಕಿತರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT