ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ: ಸಂದೇಶ್‌ಖಾಲಿಗೆ ತೆರಳಿದ ಸಿಬಿಐ ತಂಡ

Published 20 ಏಪ್ರಿಲ್ 2024, 12:36 IST
Last Updated 20 ಏಪ್ರಿಲ್ 2024, 12:36 IST
ಅಕ್ಷರ ಗಾತ್ರ

ಕೋಲ್ಕತ್ತ: ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಭೂಕಬಳಿಕೆ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುವ ಸಲುವಾಗಿ 10 ಸದಸ್ಯರ ಸಿಬಿಐ ತಂಡವು ಪಶ್ಚಿಮ ಬಂಗಾಳದ ಸಂಘರ್ಷಪೀಡಿತ ಸಂದೇಶ್‌ಖಾಲಿಗೆ ಶನಿವಾರ ಭೇಟಿ ನೀಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಬಿಐ ತಂಡದ ಒಂದು ಗುಂಪು ಸಂದೇಶ್‌ಖಾಲಿಯ ಸುಂದರಿಖಾಲಿ ಪ್ರದೇಶಕ್ಕೆ ಭೇಟಿ ನೀಡಿ ಸಂತ್ರಸ್ತರ ಜೊತೆ ಚರ್ಚೆ ನಡೆಸಿ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿತು. ಮತ್ತೊಂದು ಗುಂಪು ಸಂದೇಶ್‌ಖಾಲಿ ಪೊಲೀಸ್‌ ಠಾಣೆಗೆ ತೆರಳಿ ತನಿಖೆ ಕುರಿತು ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆಯಿತು.

ದೌರ್ಜನ್ಯ ಮತ್ತು ಭೂಕಬಳಿಕೆ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ, ಸಮಗ್ರ ವರದಿ ನೀಡಿವಂತೆ ಕಳೆದ ವಾರವಷ್ಟೇ ಕಲ್ಕತ್ತಾ ಹೈಕೋರ್ಟ್‌ ಸಿಬಿಐಗೆ ನಿರ್ದೇಶಿಸಿತ್ತು.

ತನಿಖೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಸಿಬಿಐ ಅಧಿಕಾರಿಯೊಬ್ಬರು, ‘ನಾವು ಸಂದೇಶ್‌ಖಾಲಿಯಲ್ಲಿದ್ದೇವೆ. ಅಲ್ಲಿಯ ಗ್ರಾಮಸ್ಥರ ಆರೋಪಗಳನ್ನು ದಾಖಲಿಸಿಕೊಳ್ಳುತ್ತಿದ್ದೇವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT