ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Chandrayaan-3: ಏಕಕಾಲಕ್ಕೆ 80 ಲಕ್ಷ ವೀಕ್ಷಣೆ, ಇಸ್ರೊಗೆ ಯುಟ್ಯೂಬ್ ಅಭಿನಂದನೆ

Published 14 ಸೆಪ್ಟೆಂಬರ್ 2023, 12:49 IST
Last Updated 14 ಸೆಪ್ಟೆಂಬರ್ 2023, 12:49 IST
ಅಕ್ಷರ ಗಾತ್ರ

ನವದೆಹಲಿ: ಇಸ್ರೊ ಚಂದ್ರಯಾನ–3 ಅನ್ನು ಯಶಸ್ವಿಯಾಗಿಸಿದ್ದು ಇಡೀ ಭಾರತಕ್ಕೆ ಹೆಮ್ಮೆ ತಂದಿದೆ. ಆ.23ರಂದು ವಿಕ್ರಮ್‌ ಲ್ಯಾಂಡರ್‌ ಚಂದ್ರನ ಅಂಗಳಕ್ಕೆ ಇಳಿಯುವ ನೇರಪ್ರಸಾರವನ್ನು ಜನತೆಗೆ ಕಣ್ತುಂಬಿಕೊಳ್ಳುವ ಅವಕಾಶವನ್ನೂ ಸಂಸ್ಥೆ ನೀಡಿತ್ತು. 

ವಿಕ್ರಮ್‌ ಲ್ಯಾಂಡರ್‌ನ ಲ್ಯಾಂಡಿಂಗ್‌ ವಿಡಿಯೊ ಯುಟ್ಯೂಬ್‌ನಲ್ಲಿ ಏಕಕಾಲದಲ್ಲಿ 80 ಲಕ್ಷ ಜನ ವೀಕ್ಷಣೆ ಗಳಿಸಿದೆ. ಈ ಮೂಲಕ ವಿಶ್ವ‌ದಲ್ಲೇ ಅತಿ ಹೆಚ್ಚು ಏಕಕಾಲದಲ್ಲಿ ವೀಕ್ಷಣೆಯಾದ ವಿಡಿಯೊ ಎಂಬ ಹೆಗ್ಗಳಿಕೆಯನ್ನು ಚಂದ್ರಯಾನ 3ರ ನೇರಪ್ರಸಾರದ ವಿಡಿಯೊ ಪಡೆದುಕೊಂಡಿದೆ.

ಈ ಹಿನ್ನೆಲೆಯಲ್ಲಿ ಯುಟ್ಯೂಬ್‌ ಮುಖ್ಯಸ್ಥ ನೀಲ್‌ ಮೋಹನ್‌ ಇಸ್ರೊಗೆ ಅಭಿನಂದನೆ ಹೇಳಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ‘ಇದನ್ನು ನೋಡಲು ಖುಷಿಯಾಗುತ್ತಿದೆ,  ಇಸ್ರೊ ತಂಡಕ್ಕೆ ಅಭಿನಂದನೆಗಳು. ಏಕಕಾಲಕ್ಕೆ 80 ಲಕ್ಷ ವೀಕ್ಷಣೆ ಸಾಮಾನ್ಯದ್ದಲ್ಲ’ ಎಂದು ಬರೆದುಕೊಂಡಿದ್ದಾರೆ.

‘ವಾಹ್ ಎಂದು ಉದ್ಘರಿಸುವ ವಿಷಯಗಳಲ್ಲಿ ಇದೂ ಒಂದಾಗಿದೆ. ಭಾರತವು ಚಂದ್ರನ ಮೇಲೆ ಇಳಿದಿದೆ!’ ಎಂದು ಯುಟ್ಯೂಬ್‌ ತನ್ನ ಪೋಸ್ಟ್‌ನಲ್ಲಿ ಖುಷಿಯ ಎಮೋಜಿಯೊಂದಿಗೆ ಹಂಚಿಕೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT