ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲೂನ್‌ ಹೊಡೆದುರುಳಿಸಿದ ಘಟನೆ: ಅಮೆರಿಕ ನಿರ್ಣಯ ತಳ್ಳಿಹಾಕಿದ ಚೀನಾ

Last Updated 10 ಫೆಬ್ರುವರಿ 2023, 17:26 IST
ಅಕ್ಷರ ಗಾತ್ರ

ಬೀಜಿಂಗ್: ಬೇಹುಗಾರಿಕೆ ನಡೆಸುವ ಉದ್ದೇಶದಿಂದ ಬಲೂನ್‌ ಹಾರಿಬಿಡಲಾಗಿದೆ ಎಂದು ಶಂಕಿಸಿ, ಖಂಡನಾ ನಿರ್ಣಯ ಕೈಗೊಂಡಿರುವ ಅಮೆರಿಕದ ಕೆಳಮನೆಯ ಕ್ರಮವನ್ನು ಚೀನಾ ಶುಕ್ರವಾರ ತಳ್ಳಿಹಾಕಿದೆ.

ಈ ಬಲೂನ್‌ಅನ್ನು ಹೊಡೆದುರುಳಿಸಿರುವುದು ರಾಜಕೀಯ ಪಿತೂರಿಯಾಗಿದ್ದು, ಇದೇ ವಿಷಯವನ್ನು ಅಮೆರಿಕ ದೊಡ್ಡದನ್ನಾಗಿ ಮಾಡುತ್ತಿದೆ ಎಂದೂ ಚೀನಾ ಹೇಳಿದೆ.

‘ಚೀನಾ ಈ ಬಗ್ಗೆ ತೀವ್ರ ಅಸಮಾಧಾನ ಹೊಂದಿದೆ. ಇಂಥ ನಡೆಯನ್ನು ಬಲವಾಗಿ ವಿರೋಧಿಸುತ್ತದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಾವೊ ನಿಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT