ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾನುವಾರ ಎರಡು ಪ್ರತ್ಯೇಕ ಘಟನೆಗಳಲ್ಲಿ ಸಿಐಡಿ ಅಧಿಕಾರಿ ಹಾಗೂ ಪಿಡಿಸಿ ಕಾರ್ಯಕರ್ತರೊಬ್ಬರನ್ನು ಉಗ್ರಗಾಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ದಕ್ಷಿಣ ಪುಲ್ವಾಮಾ ಜಿಲ್ಲೆಯಲ್ಲಿ ಸಿಐಡಿಯ ಸಬ್ ಇನ್ಸ್ಟೆಕ್ಟರ್ ಇಮ್ತಿಯಾಜ್ ಅಹ್ಮದ್ ಮಿರ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಶ್ರೀನಗರದ ಗುಂಗ್ಬುಗ್ ಪ್ರದೇಶದಲ್ಲಿ ಪಿಡಿಪಿ ಕಾರ್ಯಕರ್ತ ಮೊಹಮ್ಮದ್ ಅಮಿನ್ ದಾರ್ ಎಂಬುವವರ ಮೇಲೆ ಗುಂಡಿನ ದಾಳಿ ನಡೆದಿದೆ. ಆದರೆ, ಅವರು ಆಸ್ಪತ್ರೆಗೆ ಸಾಗಿರುವ ಮಾರ್ಗ ಮಧ್ಯೆ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.