ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘20ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಕೋಚಿಂಗ್ ಕೇಂದ್ರಗಳು ವಸತಿ ಪ್ರದೇಶದಲ್ಲಿ ಬೇಡ’

Published 15 ಫೆಬ್ರುವರಿ 2024, 16:01 IST
Last Updated 15 ಫೆಬ್ರುವರಿ 2024, 16:01 IST
ಅಕ್ಷರ ಗಾತ್ರ

ನವದೆಹಲಿ: ‘ಕೋಚಿಂಗ್ ಕೇಂದ್ರಗಳು 20 ವಿದ್ಯಾರ್ಥಿಗಳಿಗಿಂತಲೂ ಹೆಚ್ಚು ಹೊಂದಿದ್ದಲ್ಲಿ ಅವುಗಳು ವಸತಿ ಪ್ರದೇಶದಿಂದ ವಾಣಿಜ್ಯ ಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕು’ ಎಂದು ದೆಹಲಿ ಹೈಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.

ಕೋಚಿಂಗ್ ಫೆಡರೇಷನ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಹಾಗೂ ನ್ಯಾ. ಮನಮೀತ್ ಪಿ.ಎಸ್. ಅರೋರಾ ಅವರಿದ್ದ ವಿಭಾಗೀಯ ಪೀಠವು ಗುರುವಾರ ನಡೆಸಿತು. ‘ವಸತಿ ಪ್ರದೇಶದಲ್ಲಿನ ಕಟ್ಟಡಗಳಲ್ಲಿ ಸೂಕ್ತ ಸುರಕ್ಷತಾ ವಿಧಾನ ಹಾಗೂ ಮೂಲಸೌಕರ್ಯಗಳಿಲ್ಲದೆ ಅಪಾಯದಲ್ಲಿ ಪಾಠ ಕಲಿಯುವಂತಿದೆ’ ಎಂದು ಪೀಠವು ಕಳವಳ ವ್ಯಕ್ತಪಡಿಸಿತು.

‘ನಿಮ್ಮ ಕೋಚಿಂಗ್ ಕೇಂದ್ರಗಳಲ್ಲಿ ನೂರಾರು ವಿದ್ಯಾರ್ಥಿಗಳಿರಬಹುದು. ಹಾಗೆಂದ ಮಾತ್ರಕ್ಕೆ ನೀವು ವಸತಿ ಪ್ರದೇಶದಲ್ಲಿ ಇರುವಂತಿಲ್ಲ. ವಾಣಿಜ್ಯ ಕಟ್ಟಡಗಳಿಗೆ ಸ್ಥಳಾಂತರಗೊಳ್ಳಿ’ ಎಂದು ಮೌಖಿಕವಾಗಿ ಆದೇಶಿಸಿತು.

‘2020ರ ಫೆಬ್ರುವರಿಯಲ್ಲಿ ದೆಹಲಿ ಅಭಿವೃದ್ಧಿ ಪ್ರಾಧಿಕಾರವು ತನ್ನ ಬೈಲಾಕ್ಕೆ ಬದಲಾವಣೆ ತಂದಿದ್ದು, ಕೋಚಿಂಗ್ ಕೇಂದ್ರಗಳನ್ನೂ ಶೈಕ್ಷಣಿಕ ಕೇಂದ್ರಗಳು ಎಂದು ಕರೆದಿತ್ತು. ಹೀಗಾಗಿ ಈ ಕುರಿತು ಇನ್ನೂ ಹೆಚ್ಚಿನ ಸ್ಪಷ್ಟನೆ ಅಗತ್ಯ. ಇದಕ್ಕೆ ತಡೆ ನೀಡಬೇಕು’ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯವನ್ನು ಕೋರಿದರು.

‘2020ರ ಅಧಿಸೂಚನೆಗೆ ಪೀಠವು ತಡೆ ನೀಡುವುದಿಲ್ಲ. ಇದು ಮನುಷ್ಯರ ಜೀವದ ಪ್ರಶ್ನೆ’ ಎಂದು ನ್ಯಾಯಾಲಯ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT