ಚಂಡೀಗಢ: ಪಾಣಿಪತ್ ಜಿಲ್ಲೆಯ ಬಿಚ್ಪರಿ ಗ್ರಾಮದ ಬಳಿಯ ತಹಸಿಲ್ ಕ್ಯಾಂಪ್ ಪ್ರದೇಶದಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಆರು ಜನ ಮೃತಪಟ್ಟಿದ್ದಾರೆ.

ಈ ವೇಳೆ ದಂಪತಿ ಸೇರಿದಂತೆ ಅವರ 4 ಮಕ್ಕಳು ಮೃತಪಟ್ಟಿದ್ದಾರೆ. ಮೃತರನ್ನು ಅಬ್ದುಲ್ (45) ಅವರ ಪತ್ನಿ(40), 18 ಮತ್ತು 16 ವರ್ಷದ ಇಬ್ಬರು ಪುತ್ರಿಯರು ಹಾಗೂ 12 ಮತ್ತು 10 ವರ್ಷದ ಇಬ್ಬರು ಪುತ್ರರು ಎಂದು ಗುರುತಿಸಲಾಗಿದೆ.

ನಗರದ ಜನವಸತಿ ಪ್ರದೇಶದಲ್ಲಿ ವಾಸವಿದ್ದ ಕುಟುಂಬ ಸಿಲಿಂಡರ್ ಸೋರಿಕೆಯಿಂದ ಮನೆಗೆ ಬೆಂಕಿ ಹೊತ್ತಿಕೊಂಡು ಈ ದುರ್ಘಟನೆ ಸಂಭವಿಸಿದೆ. ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ರಕ್ಷಣಾ ತಂಡ ರಕ್ಷಿಸುವ ಹೊತ್ತಿಗೆ ಸಂತ್ರಸ್ತರು ಸುಟ್ಟು ಕರಕಲಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.