ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ರಮ ಸಂಬಂಧ ಆರೋಪ: ಹರಿದಾಡಿದ ಮಹಿಳೆಗೆ ಥಳಿಸಿದ ವಿಡಿಯೊ

Published 1 ಜುಲೈ 2024, 1:26 IST
Last Updated 1 ಜುಲೈ 2024, 1:26 IST
ಅಕ್ಷರ ಗಾತ್ರ

ರಾಯಗಂಜ್: ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾದ ಜೋಡಿಯ ಮೇಲೆ ಬರ್ಬರ ಹಲ್ಲೆ ಮಾಡಿರುವ ಕೃತ್ಯ ಕುರಿತ ವಿಡಿಯೊ ಜಾಲತಾಣದಲ್ಲಿ ಹರಿದಾಡಿದ ಹಿಂದೆಯೇ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜೋಡಿಗೆ ವ್ಯಕ್ತಿಯೊಬ್ಬರು ಬಿದಿರಿನ ಕೋಲಿನಿಂದ ತೀವ್ರವಾಗಿ ಥಳಿಸುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ಥಳಿಸುತ್ತಿರುವ ವ್ಯಕ್ತಿಯನ್ನು ಉತ್ತರ ದಿನಜ್‌ಪುರ್ ಜಿಲ್ಲೆಯ ಚೋಪ್ರಾದ ಸ್ಥಳೀಯ ಟಿಎಂಸಿ ನಾಯಕ ಎಂದು ಗುರುತಿಸಲಾಗಿದೆ. ವಿಡಿಯೊದ ಅಸಲೀಯತ್ತನ್ನು ಪರಿಶೀಲಿಸಲಾಗಿಲ್ಲ ಎಂದು ಸುದ್ದಿಸಂಸ್ಥೆಯು ತಿಳಿಸಿದೆ. 

ಆರೋಪಿ ತಜ್ಮುಲ್‌ ಅಲಿಯಾಸ್‌ ಜೆಸಿಬಿ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.

ವಿಡಿಯೊ ಹರಿದಾಡಿದ ಬೆನ್ನಲ್ಲೇ ವಿರೋಧ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌, ಸಿಪಿಎಂ ಪಕ್ಷಗಳು ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿವೆ. ಆಡಳಿತಾರೂಢ ಟಿಎಂಸಿ ಈ ಕೃತ್ಯದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದೆ.

ವಿಡಿಯೊ ಆಧರಿಸಿ, ಮಹಿಳೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಆರೋಪಿಯನ್ನು ಗುರುತಿಸಿ, ಬಂಧಿಸಲಾಗಿದೆ ಎಂದು ಇಸ್ಲಾಂಪುರ್ ಜಿಲ್ಲಾ ಪೊಲೀಸರು ಹೇಳಿಕೆ ನೀಡಿದ್ದಾರೆ. 

ಹಲ್ಲೆಗೊಳಗಾಗಿರುವ ಜೋಡಿಗೆ ರಕ್ಷಣೆ ಒದಗಿಸಲಾಗಿದೆ. ಈ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT