ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಪರಿಸ್ಥಿತಿ ಎಂದಿಗೂ ಮರೆಯಲಾಗದು: ನರೇಂದ್ರ ಮೋದಿ

Published 26 ಜೂನ್ 2023, 0:02 IST
Last Updated 26 ಜೂನ್ 2023, 0:02 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತೀಯ ಚರಿತ್ರೆಯಲ್ಲಿ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

1975ರ ಜೂನ್‌ 25ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದ ನಾಯಕರಿಗೆ ಟ್ವೀಟ್‌ ಮೂಲಕ ಗೌರವ ಸಲ್ಲಿಸಿರುವ ಮೋದಿ, ‘ತುರ್ತು ಸ್ಥಿತಿ ವಿರೋಧಿಸಿ ಪ್ರಜಾಪ್ರಭುತ್ವದ ಆಶಯಗಳನ್ನು ಬಲಗೊಳಿಸಲು ಶ್ರಮಿಸಿದ ಎಲ್ಲರೂ ಅಭಿನಂದನಾರ್ಹರು’ ಎಂದಿದ್ದಾರೆ. 

ಕಳೆದ ವಾರ ಪ್ರಸಾರಗೊಂಡ ಮನ್‌ ಕಿ ಬಾತ್‌ನಲ್ಲೂ ತುರ್ತು ಪರಿಸ್ಥಿತಿಯ ದಿನಗಳನ್ನು ಮೆಲುಕು ಹಾಕಿದ್ದ ಅವರು, ‘ಇದು ಭಾರತೀಯ ಇತಿಹಾಸದ ಕರಾಳ ಯುಗ’ ಎಂದು ಹೇಳಿದ್ದರು.

ಕೇಂದ್ರ ಸಚಿವರಾದ ಅಮಿತ್‌ ಶಾ, ರಾಜನಾಥ್ ಸಿಂಗ್, ಅನುರಾಗ್‌ ಠಾಕೂರ್, ಕಿರಣ್‌ ರಿಜಿಜು, ಸ್ಮೃತಿ ಇರಾನಿ, ಪ್ರಲ್ಹಾದ ಜೋಶಿ, ನಿತಿನ್‌ ಗಡ್ಕರಿ ಅವರು, ‘ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ನೆಹರೂ ಕುಟುಂಬದ ಅಹಂಕಾರದಿಂದ ರಾತ್ರೋರಾತ್ರಿ ಲಕ್ಷಾಂತರ ಜನರನ್ನು ಜೈಲಿಗೆ ತಳ್ಳಲಾಯಿತು’ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT