ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೇಯ ಕೃತ್ಯ; ಸಾಕ್ಷ್ಯಗಳ ಕೊರತೆಯಿಂದ ಶಿಕ್ಷೆ ಆಗಲಿಲ್ಲ’

ಸಂಜೋತಾ ಎಕ್ಸ್‌ಪ್ರೆಸ್‌ ರೈಲು ಸ್ಫೋಟ ಪ್ರಕರಣ
Last Updated 28 ಮಾರ್ಚ್ 2019, 18:01 IST
ಅಕ್ಷರ ಗಾತ್ರ

ಪಂಚಕುಲಾ, ಹರಿಯಾಣ: ‘ಸಂಜೋತಾ ಎಕ್ಸ್‌ಪ್ರೆಸ್‌ ರೈಲು ಸ್ಫೋಟ ಅತ್ಯಂತ ಹೇಯವಾದ ಕೃತ್ಯವಾಗಿದ್ದರೂ, ನಂಬಲರ್ಹ ಹಾಗೂ ಸ್ವೀಕಾರಕ್ಕೆ ಅರ್ಹವಾದ ಸಾಕ್ಷ್ಯಗಳ ಕೊರತೆಯಿಂದ ಆರೋಪಿಗಳಿಗೆ ಶಿಕ್ಷೆಯಾಗದೇ ಉಳಿದ ಪ್ರಕರಣ’ ಎಂದು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಿಶೇಷ ನ್ಯಾಯಾಲಯ ಹೇಳಿದೆ.

ಈ ಪ್ರಕರಣದಪ್ರಮುಖ ಆರೋಪಿ ನಬಾ ಕುಮಾರ್ ಸರ್ಕಾರ್‌ ಅಲಿಯಾಸ್‌ ಸ್ವಾಮಿ ಅಸೀಮಾನಂದ ಮತ್ತು ಇತರೆ ಆರೋಪಿಗಳಾದ ಲೋಕೇಶ್‌ ಶರ್ಮಾ, ಕಮಲ್‌ ಚೌಹಾಣ್‌ ಹಾಗೂ ರಾಜೀಂದರ್‌ ಚೌಧರಿ ಅವರನ್ನು ಇದೇ 20 ರಂದು ನ್ಯಾಯಾಲಯ ಖುಲಾಸೆಗೊಳಿಸಿತ್ತು.

‘ನಂಬಲರ್ಹ ಮತ್ತು ಸ್ವೀಕರಿಸಲು ಅರ್ಹವಾದ ಸಾಕ್ಷ್ಯಗಳು ಸಿಗದಿದ್ದರಿಂದ ಇಂಥ ಹೇಯ ಕೃತ್ಯಕ್ಕೆ ಶಿಕ್ಷೆ ನೀಡದೇ ತೀರ್ಪು ನೀಡಿರುವುದು ನನಗೆ ತೀವ್ರ ನೋವು ಮತ್ತು ದುಃಖ ಉಂಟುಮಾಡಿದೆ.ಆರೋಪಗಳನ್ನು ಸಾಬೀತು ಮಾಡುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದ್ದು, ಭಯೋತ್ಪಾದನೆ ಕೃತ್ಯವು ಬಗೆಹರಿಯದೇ ಉಳಿದಿದೆ’ ಎಂದು ನ್ಯಾಯಾಧೀಶ ಜಗದೀಪ್‌ ಸಿಂಗ್‌ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ,

ಈ ಪ್ರಕರಣ ಕುರಿತು ನೀಡಿರುವ ತೀರ್ಪು ಗುರುವಾರ ಸಾರ್ವಜನಿಕವಾಗಿ ಪ್ರಕಟಗೊಂಡಿದೆ.ಸಂಜೋತಾ ರೈಲಿನಲ್ಲಿ 2007ರ ಫೆಬ್ರುವರಿ 18 ರಂದು ಬಾಂಬ್‌ ಸ್ಫೋಟಿಸಲಾಗಿತ್ತು. ಇದರಲ್ಲಿ 68 ಮಂದಿ ಮೃತಪಟ್ಟಿದ್ದರು.

ಈ ಪ್ರಕರಣದಲ್ಲಿ ಒಟ್ಟು ಎಂಟು ಜನರನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಒಬ್ಬ ಆರೋಪಿಯ ಹತ್ಯೆಯಾಗಿದೆ. ಮೂವರು ಆರೋಪಿಗಳು ಪತ್ತೆಯಾಗಿಲ್ಲ. ಇನ್ನುಳಿದ ನಾಲ್ಕು ಜನ ಮಾರ್ಚ್‌ 20 ರಂದು ಖುಲಾಸೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT