ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಕೂಲ ಹವಾಮಾನ: ದೆಹಲಿಯ 18 ವಿಮಾನಗಳ ಮಾರ್ಗ ಬದಲು

Published 2 ಡಿಸೆಂಬರ್ 2023, 7:25 IST
Last Updated 2 ಡಿಸೆಂಬರ್ 2023, 7:25 IST
ಅಕ್ಷರ ಗಾತ್ರ

ನವದೆಹಲಿ: ಹವಾಮಾನ ವೈಪರೀತ್ಯದಿಂದಾಗಿ ಇಂದು(ಶನಿವಾರ) ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ 18 ವಿಮಾನಗಳ ಹಾರಾಟದ ಮಾರ್ಗವನ್ನು ಬದಲಿಸಲಾಗಿದೆ.

ವಿಮಾನಗಳನ್ನು ಜೈಪುರ್‌, ಲಖನೌ, ಅಹಮದಾಬಾದ್ ಮತ್ತು ಅಮೃತಸರಕ್ಕೆ ಮಾರ್ಗ ಬದಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಇಂದಿರಾಗಾಂಧಿ ಇಂಟರ್‌ನ್ಯಾಷನಲ್ (ಐಜಿಐ) ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ಬೆಳಿಗ್ಗೆ 7 ರಿಂದ 10ರವರೆಗೆ ವಿಮಾನಗಳ ಮಾರ್ಗ ಬದಲಾಯಿಸಲಾಗಿದೆ.

ಇಂದು ಬೆಳಗ್ಗೆ ರಾಷ್ಟ್ರ ರಾಜಧಾನಿಯನ್ನು ಮಂಜು ಆವರಿಸಿದ್ದು, ಕನಿಷ್ಠ ತಾಪಮಾನ 12.3 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ.

ಗಾಳಿಯ ಗುಣಮಟ್ಟ ಕಳಪೆ:

ಶನಿವಾರ ಬೆಳಿಗ್ಗೆ ದೆಹಲಿಯ ಸರಾಸರಿ ಗಾಳಿಯ ಗುಣಮಟ್ಟ 'ಅತ್ಯಂತ ಕಳಪೆ' ವಿಭಾಗದಲ್ಲಿ ದಾಖಲಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ, ದೆಹಲಿಯ ಆನಂದ ವಿಹಾರ್‌ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 388, ಅಶೋಕ ವಿಹಾರದಲ್ಲಿ 386, ಲೋಧಿ ರಸ್ತೆಯಲ್ಲಿ 349 ಹಾಗೂ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ 366 ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT