ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿಯಲ್ಲಿ ಭಾರಿ ಮಳೆ: ವಿಮಾನ ನಿಲ್ದಾಣದ ಚಾವಣಿ ಕುಸಿದು ಕ್ಯಾಬ್‌ ಚಾಲಕ ಸಾವು

Published 29 ಜೂನ್ 2024, 15:10 IST
Last Updated 29 ಜೂನ್ 2024, 15:10 IST
ಅಕ್ಷರ ಗಾತ್ರ

ನವದೆಹಲಿ: ಮಳೆಯಿಂದಾಗಿ ಇಲ್ಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಚಾವಣಿಯ ಭಾಗವೊಂದು ಕುಸಿದ ಕಾರಣ ಮೃತಪಟ್ಟ ಕ್ಯಾಬ್‌ ಚಾಲಕನ ಕುಟುಂಬವು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸುವ ಕುರಿತು ನಿರ್ಧರಿಸುವುದಾಗಿ ಶನಿವಾರ ಹೇಳಿದೆ.

ಮೃತ ಚಾಲಕ ರಮೇಶ್‌ ಕುಮಾರ್‌ (45) ಅವರ ದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. 

‘3.30ಕ್ಕೆ ನಮ್ಮ ತಂದೆಯ ಅಂತ್ಯಕ್ರಿಯೆ ನಡೆಸಲಾಗುವುದು. ಬಳಿಕ ಅವರ ಸಾವಿಗೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸುವ ಕುರಿತು ತೀರ್ಮಾನಿಸಲಾಗುವುದು’ ಎಂದು ರಮೇಶ್‌ ಮಗ ರವೀಂದ್ರ (25) ತಿಳಿಸಿದರು. ಸರ್ಕಾರ ಘೋಷಿಸಿರುವ ಪರಿಹಾರ ಮೊತ್ತದ ಕುರಿತೂ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ಬೆಳಿಗ್ಗೆ ಟರ್ಮಿನಲ್‌– 1ರಲ್ಲಿ ರಮೇಶ್‌ ಅವರು ಪ್ರಯಾಣಿಕರಿಗಾಗಿ ಕಾಯುತ್ತಿದ್ದ ವೇಳೆ ಅವರ ವಾಹನದ ಮೇಲೆ ನಿಲ್ದಾಣದ ಚಾವಣಿಯ ಒಂದು ಭಾಗವು ಬಿದ್ದು ಅವರು ಮೃತಟ್ಟಿದ್ದರು. ಅವರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳು ಮತ್ತು ಹೆಣ್ಣುಮಕ್ಕಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT