ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಯೋತ್ಪಾದಕರಿಗೆ ಹಣ: ಸಂಸದ ರಶೀದ್ ಎಂಜಿನಿಯರ್‌ ಜಾಮೀನು ಅರ್ಜಿ ವಿಚಾರಣೆ ಆ. 28ಕ್ಕೆ

Published 27 ಆಗಸ್ಟ್ 2024, 14:00 IST
Last Updated 27 ಆಗಸ್ಟ್ 2024, 14:00 IST
ಅಕ್ಷರ ಗಾತ್ರ

ನವದೆಹಲಿ: ಜೈಲಿನಲ್ಲಿದ್ದುಕೊಂಡೇ ಚುನಾವಣೆ ಎದುರಿಸಿ ಗೆದ್ದ ಸಂಸದ ರಶೀದ್ ಎಂಜಿನಿಯರ್‌ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ದೆಹಲಿ ನ್ಯಾಯಾಲಯ ಬುಧವಾರ (ಆ. 28) ನಡೆಸಲಿದೆ. 

ಜಮ್ಮು ಮತ್ತು ಕಾಶ್ಮೀರದಲ್ಲಿ 2017ರಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ನೀಡಿದ ಆರೋಪದಡಿ ರಶೀದ್ ಬಂಧಿಸಲಾಗಿತ್ತು.  2019ರಿಂದ ಇವರು ಜೈಲಿನಲ್ಲಿದ್ದಾರೆ.

ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಕ್ಕೆ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶರು ಆ. 20ರಂದು ನೋಟಿಸ್ ಜಾರಿ ಮಾಡಿದ್ದರು. ಇದಕ್ಕೆ ಆ. 28ರಂದು ಉತ್ತರಿಸುವಂತೆ ನಿರ್ದೇಶಿಸಿದ್ದರು.

ತಿಹಾರ್ ಜೈಲಿನಲ್ಲಿರುವ ರಶಿದ್ ಅವರನ್ನು ಇದಕ್ಕೂ ಮೊದಲು ಜುಲೈ 5ರಂದು ಲೋಕಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಲು ಪೆರೋಲ್ ಮೇಲೆ ನ್ಯಾಯಾಲಯ ಬಿಡುಗಡೆ ಮಾಡಿತ್ತು.

ಈ ಪ್ರಕರಣದಲ್ಲಿ ಎನ್‌ಐಎ ಈಗಾಗಲೇ ಆರೋಪಪಟ್ಟಿ ಸಲ್ಲಿಸಿದ್ದು, ಕಾಶ್ಮೀರ ಪ್ರತ್ಯೇಕತಾವಾದಿ ಮುಖಂಡ ಯಾಸಿನ್ ಮಲ್ಲಿಕ್, ಲಷ್ಕರ್ ಎ ತಯ್ಯಬಾ ಸಂಸ್ಥಾಪಕ ಹಫೀಝ್ ಸಯೀದ್ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಮುಖಂಡ ಸಯ್ಯದ್ ಸಲಾಹುದ್ದೀನ್ ಹೆಸರನ್ನು ಸೇರಿಸಿದೆ. 2022ರಲ್ಲಿ ವಿಚಾರಣಾ ನ್ಯಾಯಾಲಯವು ಮಲ್ಲಿಕ್‌ಗೆ ಜೀವಾವಧಿ ಶಿಕ್ಷೆಯನ್ನು ನೀಡಿತ್ತು.

ಶೇಖ್ ಅಬ್ದುಲ್ ರಶೀದ್ ಅವರು ಎಂಜಿನಿಯರ್ ರಶೀದ್ ಎಂದೇ ಪರಿಚಿತರು. 2024ರ ಲೋಕಸಭಾ ಚುನಾವಣೆಯಲ್ಲಿ ಬಾರಾಮುಲ್ಲಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಶೀದ್, ನ್ಯಾಷನಲ್ ಕಾನ್ಫರೆನ್ಸ್‌ ಮುಖಂಡ ಒಮರ್ ಅಬ್ದುಲ್ಲಾ ವಿರುದ್ಧ ಜಯ ಸಾಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT