ನವದೆಹಲಿ: ಭಯೋತ್ಪಾದಕ ಸಂಘಟನೆಗಳಿಗೆ ಆರ್ಥಿಕ ನೆರವು ನೀಡಿದ್ದ ಆರೋಪದಡಿ ಬಂಧಿತರಾಗಿರುವ ಸಂಸದ ರಶೀದ್ ಎಂಜಿನಿಯರ್ ಅವರ ಜಾಮೀನು ಅರ್ಜಿಗೆ ಸಂಬಂಧಿಸಿದ ಆದೇಶವನ್ನು ದೆಹಲಿಯ ಕೋರ್ಟ್ ಬುಧವಾರ ಕಾಯ್ದಿರಿಸಿತು.
ರಶೀದ್ ಎಂಜಿನಿಯರ್ ಎಂದೇ ಗುರುತಿಸುವ ಶೇಖ್ ಅಬ್ದುಲ್ ರಶೀದ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಇಲ್ಲಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಚಂದರ್ ಜಿತ್ ಸಿಂಗ್ ಅವರು ನಡೆಸಿದ್ದು, ಆದೇಶ ಕಾಯ್ದಿರಿಸಿದರು.
ಅರ್ಜಿ ವಿಚಾರಣೆಗೆ ಪರಿಗಣಿಸಿದ್ದ ಕೋರ್ಟ್, ಪ್ರತಿಕ್ರಿಯೆ ದಾಖಲಿಸಲು ಆಗಸ್ಟ್ 20ರಂದು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಆದೇಶಿಸಿತ್ತು. ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು ನೀಡಿದ್ದ ಆರೋಪದಡಿ ಎನ್‌ಐಎ ಎಂಜಿನಿಯರನ್ನು ಬಂಧಿಸಿದ್ದು, 2019ರಿಂದ ಜೈಲಿನಲ್ಲಿದ್ದಾರೆ.