ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21 ವರ್ಷ ಪೂರೈಸಿದ ದೆಹಲಿ ಮೆಟ್ರೊ

Published 24 ಡಿಸೆಂಬರ್ 2023, 13:50 IST
Last Updated 24 ಡಿಸೆಂಬರ್ 2023, 13:50 IST
ಅಕ್ಷರ ಗಾತ್ರ

ನವದೆಹಲಿ: 2002ರ ಡಿಸೆಂಬರ್‌ 24ರಂದು ಆರಂಭಗೊಂಡ ದೆಹಲಿ ಮೆಟ್ರೊ, ಇಂದಿಗೆ 21 ವರ್ಷಗಳನ್ನು ಪೂರೈಸಿದೆ ಎಂದು ದೆಹಲಿ ಮೆಟ್ರೊ ರೈಲು ನಿಗಮ (ಡಿಎಂಆರ್‌ಸಿ) ತಿಳಿಸಿದೆ.

2002ರ ಡಿಸೆಂಬರ್‌ 24ರಂದು ದೆಹಲಿ ಮೆಟ್ರೊದ ಮೊದಲ ಮಾರ್ಗವಾದ ಶಹದಾರದಿಂದ ತಿಸ್‌ ಹಜಾರಿವರೆಗಿನ ಕೆಂಪು ಮಾರ್ಗವನ್ನು ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಉದ್ಘಾಟಿಸಿದ್ದರು. ಅಂದಿನಿಂದ, ದೆಹಲಿ ಮೆಟ್ರೊ ದೆಹಲಿಯ ಜೀವನಾಡಿಯಾಗಿ ಹೊರಹೊಮ್ಮಿದೆ ಎಂದು ಡಿಎಂಆರ್‌ಸಿ ಹೇಳಿದೆ.

‘2002ರಲ್ಲಿ ಆರು ನಿಲ್ದಾಣಗಳನ್ನೊಳಗೊಂಡ ಕೇವಲ 8.4 ಕಿ.ಮೀ ಉದ್ದದ ನೆಟ್‌ವರ್ಕ್‌ನಿಂದ ಪ್ರಾರಂಭಗೊಂಡ ದೆಹಲಿ ಮೆಟ್ರೊ, ಇಂದು 288 ನಿಲ್ದಾಣಗಳ 393 ಕಿ.ಮೀ ಉದ್ದದ ನೆಟ್‌ವರ್ಕ್‌ವರೆಗೆ ವಿಸ್ತರಿಸಿದೆ. ಪ್ರತಿದಿನ ಆರು ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಮೆಟ್ರೊದಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ಮೂಲಕ ದೆಹಲಿ ಮೆಟ್ರೊ ಇಡೀ ವಿಶ್ವದ ಅತಿದೊಡ್ಡ ಸಮೂಹ ಸಾರಿಗೆ ವ್ಯವಸ್ಥೆಗಳಲ್ಲಿ ಒಂದಾಗಿದೆ’ ಎಂದು ಡಿಎಂಆರ್‌ಸಿ ತಿಳಿಸಿದೆ.

ರಾಷ್ಟ್ರ ರಾಜಧಾನಿಯಾದ್ಯಂತ ಇನ್ನೂ 65 ಕಿ.ಮೀಗಳ ಹೊಸ ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ, ಈ ಮೂಲಕ ಮುಂದಿನ ದಿನಗಳಲ್ಲಿ ಮೆಟ್ರೊ ನೆಟ್‌ವರ್ಕ್‌ ಉದ್ದವು 400 ಕಿ. ಮೀಗಿಂತಲೂ ಹೆಚ್ಚಾಗಲಿದೆ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT