ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೈಹಿಕ–ಮಾನಸಿಕ ಹಿಂಸೆ: ಧರ್ಮಶಾಲಾ ಬಿಜೆಪಿ ಶಾಸಕರ ವಿರುದ್ಧ ಪತ್ನಿ ಆರೋಪ

Last Updated 26 ಜೂನ್ 2021, 8:39 IST
ಅಕ್ಷರ ಗಾತ್ರ

ಶಿಮ್ಲಾ: 'ಧರ್ಮಶಾಲಾ ಬಿಜೆಪಿ ಶಾಸಕ ವಿಶಾಲ್ ನೆಹ್ರಿಯಾ ಅವರು ‌ತನಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ‘ ಎಂದು ಶಾಸಕರ ಪತ್ನಿಯೂ ಆಗಿರುವ ಹಿಮಾಚಲ ಪ್ರದೇಶ ಆಡಳಿತ ಸೇವೆಗಳ (ಎಚ್‌ಪಿಎಎಸ್‌) ಅಧಿಕಾರಿ ಓಶಿನಿ ಶರ್ಮಾ ಅವರು ಆರೋಪಿಸಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

11 ನಿಮಿಷಗಳ ಈ ವಿಡಿಯೊ ತುಣುಕಿನಲ್ಲಿ ‘ವಿಶಾಲ್ ಅವರು ನನಗೆ ಹಲವು ಬಾರಿ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ಗುರುವಾರ ನನಗೆ ಮೂರು ಬಾರಿ ಕಪಾಳಕ್ಕೆ ಹೊಡೆದಿದ್ದಾರೆ‘ ಎಂದು ದೂರಿದ್ದಾರೆ.

ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ನಗ್ರೊಟಾ ಸುರಿಯನ್‌ನಲ್ಲಿರುವ ಗ್ರಾಮೀಣ ಅಭಿವೃದ್ಧಿ ಏಜೆನ್ಸಿಯಲ್ಲಿ ಕ್ಷೇತ್ರಾಭಿವೃದ್ಧಿ ಅಧಿಕಾರಿಯಾಗಿ ಓಶಿನಿ ಕಾರ್ಯನಿರ್ವಹಿಸುತ್ತಿದ್ದಾರೆ‌.

ಕಳೆದ ಏಪ್ರಿಲ್ 26ರಂದು ವಿಶಾಲ್ ಹಾಗೂ ಓಶಿನಿ ವಿವಾಹವಾಗಿದ್ದಾರೆ. ಸದ್ಯ ಓಶಿನಿ, ತನ್ನ ತವರು ಮನೆಗೆ ತೆರಳಿರುವುದಾಗಿ ಹೇಳಿದ್ದಾರೆ. ಘಟನೆ ಕುರಿತು ಶಾಸಕರ ಪ್ರತಿಕ್ರಿಯೆಗಾಗಿ ಪ್ರಯತ್ನಿಸಿದಾಗ, ಅವರು ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

2019ರಲ್ಲಿ ನಡೆದ ವಿಧಾನಸಭೆಯ ಉಪಚುನಾವಣೆಯಲ್ಲಿ ಧರ್ಮಶಾಲಾ ಕ್ಷೇತ್ರದಿಂದ ವಿಶಾಲ್ ನೆಹ್ರಿಯಾ (32) ಶಾಸಕರಾಗಿ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT