ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಯಾಣ: ಹರಪ್ಪ ಕಾಲದ ಮಾನವ ಅಸ್ಥಿಪಂಜರಗಳು ಪತ್ತೆ, ಡಿಎನ್ಎ ಪರೀಕ್ಷೆಗೆ ರವಾನೆ

Last Updated 8 ಮೇ 2022, 12:36 IST
ಅಕ್ಷರ ಗಾತ್ರ

ರಾಖಿಗಡಿ: ಹರಪ್ಪ ಕಾಲದ ಎರಡು ಮಾನವ ಅಸ್ಥಿಪಂಜರಗಳು ಹರಿಯಾಣದ ಹಿಸ್ಸಾರ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಅವುಗಳನ್ನು ಡಿಎನ್‌ಎ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ತಿಳಿಸಿದೆ.

ಜಿಲ್ಲೆಯ ರಾಖಿಗಡಿ ಎಂಬಲ್ಲಿ ಇಬ್ಬರು ಮಹಿಳೆಯರ ಅಸ್ಥಿಪಂಜರಗಳು ಸಿಕ್ಕಿವೆ. ಈ ಅಸ್ಥಿಪಂಜರಗಳ ಪರೀಕ್ಷೆಯಿಂದ ಹರಪ್ಪ ಕಾಲದ ಜನರ ಆಹಾರ ಪದ್ಧತಿ ಹಾಗೂ ಅವರ ಇತಿಹಾಸದ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಇಲಾಖೆಯ ಜಂಟಿ ಮಹಾರ್ದೇಶಕ ಎಸ್‌.ಕೆ.ಮಂಜುಲ್ ಹೇಳಿದ್ದಾರೆ.

ಈ ಮೃತ ದೇಹಗಳು ಸುಮಾರು ಐದು ಸಾವಿರ ವರ್ಷಗಳ ಹಿಂದಿನವು ಎಂದು ಅಂದಾಜಿಸಲಾಗಿದೆ. ಮೃತದೇಹಗಳ ಪಕ್ಕದಲ್ಲೇ ಮಡಿಕೆ ಮತ್ತು ಕರಕುಶಲ ವಸ್ತುಗಳು ದೊರೆತಿವೆ. ದೆಹಲಿಯ ವಾಯವ್ಯ ದಿಕ್ಕಿನಲ್ಲಿ 150 ಕಿ.ಮೀ ದೂರದಲ್ಲಿರುವ ರಾಖಿಗಡಿಯಲ್ಲಿ ಫೆ.24 ರಂದು ಉತ್ಖನನ ಆರಂಭಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT