ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇ–ತ್ಯಾಜ್ಯದಿಂದ 5 ಲಕ್ಷ ಉದ್ಯೋಗ ಸೃಷ್ಟಿ’

ಉತ್ಪಾದಕರು, ಬಳಕೆದಾರರು ಹೊಣೆ ಹಂಚಿಕೊಂಡರೆ ಸಮರ್ಥ ನಿರ್ವಹಣೆ
Last Updated 3 ಏಪ್ರಿಲ್ 2019, 20:05 IST
ಅಕ್ಷರ ಗಾತ್ರ

ನವದೆಹಲಿ: ಎಲೆಕ್ಟ್ರಾನಿಕ್ ತ್ಯಾಜ್ಯ (ಇ–ತ್ಯಾಜ್ಯ) ನಿರ್ವಹಣೆಗೆ ಸಂಬಂಧಿಸಿದಂತೆ 2025ರ ವೇಳೆಗೆ 4.5 ಲಕ್ಷ ಉದ್ಯೋಗಗಳ ಸೃಷ್ಟಿಯಾಗಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಗಮ (ಐಎಫ್‌ಸಿ) ಬುಧವಾರ ಹೇಳಿದೆ.

ವಿಶ್ವಬ್ಯಾಂಕ್‌ನ ಸದಸ್ಯ ಸಂಸ್ಥೆಯೂ ಆಗಿರುವ ಐಎಫ್‌ಸಿ, ‘ಇ–ತ್ಯಾಜ್ಯದ ಸಾರಿಗೆ, ಉತ್ಪಾದನೆ ಹಾಗೂ ಇತರ ಸಂಬಂಧಿತ ಕ್ಷೇತ್ರಗಳಲ್ಲಿ ಪರೋಕ್ಷವಾಗಿ 1.8 ಲಕ್ಷಗಳ ಉದ್ಯೋಗಗಳು ಸೃಜಿಸಲಿವೆ’ ಎಂದು ಹೇಳಿದೆ.

ಐಎಫ್‌ಸಿ, 2017ರಿಂದ ಈವರೆಗೆ ವ್ಯಕ್ತಿಗಳು ಹಾಗೂ ಕಂಪನಿಗಳಿಂದ 4 ಸಾವಿರ ಮೆಟ್ರಿಕ್‌ ಟನ್‌ ಇ–ತ್ಯಾಜ್ಯವನ್ನು ಸಂಗ್ರಹಿಸಿ, ಸಂಸ್ಕರಿಸಿದೆ.

ಭಾರತದಲ್ಲಿ ಇ–ತ್ಯಾಜ್ಯ ನಿರ್ವಹಣೆ: ಮುಂದಿರುವ ದಾರಿಎಂಬ ವಿಷಯ ಕುರಿತು ಇಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಮಾತನಾಡಿದ ಪರಿಸರ ಸಚಿವಾಲಯದ ಅಪಾಯಕಾರಿ ವಸ್ತುಗಳ ನಿರ್ವಹಣಾ ವಿಭಾಗದ ಜಂಟಿ ನಿರ್ದೇಶಕ ಸೋನು ಸಿಂಗ್‌, ‘ಉದ್ಯೋಗ ಸೃಷ್ಟಿಯೂ ಸೇರಿದಂತೆ ಇ–ತ್ಯಾಜ್ಯ ನಿರ್ವಹಣೆ ಕ್ಷೇತ್ರದಲ್ಲಿ ಐಎಫ್‌ಸಿ ತೋರುತ್ತಿರುವ ಬದ್ಧತೆ ಹಾಗೂ ಹೊಣೆಗಾರಿಕೆ ಬಗ್ಗೆ ಸಂತೋಷವಾಗುತ್ತದೆ’ ಎಂದು ಹೇಳಿದರು.

‘ಸರ್ಕಾರ, ಎಲೆಕ್ಟ್ರಿಕಲ್ಮತ್ತು ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಉತ್ಪಾದಕರು ಹಾಗೂ ಇವುಗಳ ಬಳಕೆದಾರರು ಹೊಣೆಗಾರಿಕೆ ಹಂಚಿಕೊಂಡಲ್ಲಿ, ಭಾರತದಲ್ಲಿ ಇ–ತ್ಯಾಜ್ಯಗಳ ಸಮರ್ಥ ನಿರ್ವಹಣೆ ಸಾಧ್ಯವಾಗುತ್ತದೆ.ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಉದ್ದಿಮೆಗಳಿಂದ ಸಾಕಷ್ಟು ಪ್ರಮಾಣದ ಇ–ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಇದರ ನಿರ್ವಹಣೆಗೆ ಈ ಉದ್ಯಮಗಳು ಸರ್ಕಾರಕ್ಕೆ ಸಾಕಷ್ಟು ನೆರವು ನೀಡುತ್ತಿವೆ. ಅಲ್ಲದೇ, ಈ ಕ್ಷೇತ್ರ ದೇಶದ ಆರ್ಥಿಕತೆ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರವನ್ನೂ ವಹಿಸಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT