ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ನಾಗರಿಕರಿಗೆ ವಂಚಿಸಿದ ಪ್ರಕರಣ: ಆರೋಪಿಯನ್ನು ಬಂಧಿಸಿದ ಇ.ಡಿ

Published 1 ಮಾರ್ಚ್ 2024, 13:07 IST
Last Updated 1 ಮಾರ್ಚ್ 2024, 13:07 IST
ಅಕ್ಷರ ಗಾತ್ರ

ನವದೆಹಲಿ: ಸಾಲ ನೀಡುವುದಾಗಿ ನಕಲಿ ಕಾಲ್‌ ಸೆಂಟರ್‌ಗಳ ಮೂಲಕ ನಂಬಿಸಿ ಅಮೆರಿಕದ ಪ್ರಜೆಗಳಿಗೆ ವಂಚಿಸಿದ ಮತ್ತು ಹಣ ಅಕ್ರಮ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಜೈಪುರ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವುದಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ತಿಳಿಸಿದೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ರಫೀಕ್‌ ಖಾನ್‌ ಎಂಬಾತನನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಾದ ನಂತರ ತಲೆಮರೆಸಿಕೊಂಡಿದ್ದ ಈತ ಸಂಯುಕ್ತ ಅರಬ್‌ ಸಂಸ್ಥಾನದ ಶಾರ್ಜಾಕ್ಕೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾಗ ಜೈಪುರ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ ಎಂದು ಇ.ಡಿ ತಿಳಿಸಿದೆ.

ಜೈಪುರ, ಮೊಹಾಲಿ, ಮಥುರಾ ಮತ್ತು ದೇಶದ ಇತರ ಕೆಲವು ಭಾಗಗಳಿಂದ ನಕಲಿ ಕಾಲ್ ಸೆಂಟರ್‌ಗಳ ಮೂಲಕ ಅಮೆರಿಕದ ನಾಗರಿಕರಿಗೆ ಕಡಿಮೆ ಬಡ್ಡಿಗೆ ಸಾಲ ನೀಡುವುದಾಗಿ ನಂಬಿಸಿ ವಂಚಿಸಿದ್ದ. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಲ್ಲಿ ಖಾನ್‌ ಕೂಡ ಒಬ್ಬನಾಗಿದ್ದಾನೆ. ಈ ಪ್ರಕರಣ ಸಂಬಂಧ ಈಗಾಗಲೇ ಶಹನವಾಜ್ ಅಹ್ಮದ್ ಜೀಲಾನಿ, ವಿಪಿನ್ ಕುಮಾರ್ ಶರ್ಮಾ ಮತ್ತು ವಿರಾಜ್ ಸಿಂಗ್ ಕುಂತಲ್ ಎಂಬುವವರನ್ನು ಬಂಧಿಸಲಾಗಿದೆ. ಈ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. 2023ರ ಆಗಸ್ಟ್‌ನಲ್ಲಿ ಇವರ ವಿರುದ್ಧ  ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಕೇಂದ್ರೀಯ ತನಿಖಾ ಏಜೆನ್ಸಿ ಹೇಳಿದೆ.

ವಂಚನೆಯಿಂದ ಗಳಿಸಿದ ಹಣವನ್ನು ಆರೋಪಿಗಳು ಶೆಲ್‌ ಕಂಪನಿಗಳ ಹೆಸರಿನಲ್ಲಿ ತೆರೆದಿದ್ದ ವಿವಿಧ ಭಾರತೀಯ ಮತ್ತು ವಿದೇಶಿ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ಡಾರೆ. ಈ ಹಣವನ್ನು ಆಸ್ತಿಗಳ ಮೇಲೆ ಹೂಡಿಕೆ ಮಾಡಿದ್ದಾರೆ ಎಂದು ಇ.ಡಿ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT