ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ವಲಸೆಗೆ ಸಹಕರಿಸುತ್ತಿದ್ದ ವಂಚಕರ ಸ್ವತ್ತುಗಳ ಮೇಲೆ ಇ.ಡಿ ದಾಳಿ

Published 21 ಜನವರಿ 2024, 16:22 IST
Last Updated 21 ಜನವರಿ 2024, 16:22 IST
ಅಕ್ಷರ ಗಾತ್ರ

ನವದೆಹಲಿ: ನಕಲಿ ವೀಸಾ ಮತ್ತು ಪಾಸ್‌ಪೋರ್ಟ್‌ಗಳನ್ನು ಬಳಿಸಿ ಭಾರತೀಯರನ್ನು ಅಕ್ರಮವಾಗಿ ವಿದೇಶಗಳಿಗೆ ಕಳಿಸುತ್ತಿದ್ದ ಪ್ರಮುಖ ವಂಚಕರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಭಾನುವಾರ ಹೇಳಿದೆ.

ವಂಚಕರಾದ ಬಾಬ್ಬಿ ಆಲಿಯಾಸ್‌ ಭರತ್‌ಭಾಯ್‌ ಪಟೇಲ್‌, ಚರಣ್ಜಿತ್‌ ಸಿಂಗ್‌ ಮತ್ತು ಇತರರಿಗೆ ಸಂಬಂಧಪಟ್ಟ ಸ್ಥಳಗಳಲ್ಲಿ ಜನವರಿ 19 ಮತ್ತು 20ರಂದು ಶೋಧ ನಡೆಸಲಾಗಿದೆ. ಅದರಂತೆ, ಗುಜರಾತ್‌ನ ಅಹಮದಾಬಾದ್, ಸೂರತ್‌ ಮತ್ತು ಮೆಹ್ಸಾಣ ಮತ್ತು ದೆಹಲಿಯಲ್ಲಿ ಶೋಧ ಕೈಗೊಳ್ಳಲಾಯಿತು ಎಂದು ಇ.ಡಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ವಿದೇಶಗಳಿಗೆ ಅಕ್ರಮವಾಗಿ ವಲಸೆ ಹೋಗುವವರಿಗೆ ಇವರು ಸಹಾಯ ಮಾಡುತ್ತಿದ್ದರು. ಒಬ್ಬ ಪ್ರಯಾಣಿಕನಿಗೆ ₹60ರಿಂದ 70 ಲಕ್ಷ, ದಂಪತಿಗೆ ₹1– 1.25 ಕೋಟಿ, ಮಕ್ಕಳಿರುವ ಕುಟುಂಬಕ್ಕೆ ₹1.25– 1.75 ಕೋಟಿ ಹಣವನ್ನು ಇವರು ನಿಗದಿಪಡಿಸಿದ್ದರು. ಹಣ ಅಕ್ರಮ ತಡೆ ವರ್ಗಾವಣೆ ಕಾಯ್ದೆಯ (ಪಿಎಂಎಲ್‌ಎ) ಹಲವು ಸೆಕ್ಷನ್‌ಗಳ ಅಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಇ.ಡಿ ಹೇಳಿದೆ.‌

ಇದಕ್ಕೂ ಮೊದಲು, ಗುಜರಾತ್‌ ಪೊಲೀಸರು ಇವರ ವಿರುದ್ಧ ಐಪಿಸಿ ಮತ್ತು ಪಾಸ್‌ಪೋರ್ಟ್‌ ಕಾಯ್ದೆ ಅಡಿ ಎಫ್‌ಐಆರ್‌ ದಾಖಲಿಸಿದ್ದರು. 

ಎರಡು ದಿನಗಳ ಕಾರ್ಯಾಚರಣೆ ವೇಳೆ, ₹1.5 ಕೋಟಿ ಭಾರತೀಯ ಕರೆನ್ಸಿ ಮತ್ತು ₹21 ಲಕ್ಷ ವಿದೇಶಿ ಕರೆನ್ಸಿ, ಡಿಜಿಟಲ್‌ ರೂಪದ ಸಾಕ್ಷ್ಯ ಮತ್ತು ಇತರ ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಇ.ಡಿ ಹೇಳಿದೆ.

ನಾಲ್ವರು ಸದಸ್ಯರ ಭಾರತೀಯ ಕುಟುಂಬವೊಂದು ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ವೇಳೆ ತೀವ್ರ ಚಳಿಗೆ ಸಿಲುಕಿ ಮೃತಪಟ್ಟಿದ್ದ ಘಟನೆ 2022ರಲ್ಲಿ ನಡೆದಿತ್ತು. ಈ ಪ್ರಕರಣದಲ್ಲಿ ಪಟೇಲ್‌ ಅವರನ್ನು ಅದೇ ವರ್ಷ ಪೊಲೀಸರು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT