ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದ 'ಮಣಪ್ಪುರಂ' ಫೈನಾನ್ಸ್ ಮೇಲೆ ಇ.ಡಿ ದಾಳಿ

Published 3 ಮೇ 2023, 11:49 IST
Last Updated 3 ಮೇ 2023, 11:49 IST
ಅಕ್ಷರ ಗಾತ್ರ

ನವದೆಹಲಿ/ಕೊಚ್ಚಿ : ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇ.ಡಿ.) ಬುಧವಾರ ಕೇರಳದ ಮಣಪ್ಪುರಂ ಫೈನಾನ್ಸ್‌ಗೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮಾರ್ಗಸೂಚಿಗೆ ವಿರುದ್ಧವಾಗಿ ಕಂಪನಿಯು ₹ 150 ಕೋಟಿ ಗಿಂತ ಹೆಚ್ಚಿನ ಸಾರ್ವಜನಿಕ ಠೇವಣಿಗಳನ್ನು ಸಂಗ್ರಹಿಸಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪುರಾವೆಗಳನ್ನು ಸಂಗ್ರಹಿಸಲು ಶೋಧ ನಡೆಸಲಾಗಿದೆ ಎಂದು ಹೇಳಿವೆ. 

ತ್ರಿಶೂರ್‌ನಲ್ಲಿ ಇರುವ ಕಂಪನಿಯ ಪ್ರಧಾನ ಕಚೇರಿ ಮತ್ತು ಅದರ ಪ್ರವರ್ತಕರ ಕಚೇರಿಗಳು ಸೇರಿದಂತೆ ಒಟ್ಟು ನಾಲ್ಕು ಕಡೆ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಂಪನಿಯು ದೊಡ್ಡ ಮೊತ್ತದ ನಗದು ವಹಿವಾಟು ನಡೆಸಿರುವ ಬಗ್ಗೆ ಸಂಶಯ ಇದ್ದು, ಈ ವೇಳೆ ದಾಖಲೆಗಳನ್ನು ಸಂಗ್ರಹಿಸಲು  ಹಾಗೂ ಕಂಪನಿ ಅಧಿಕಾರಿಗಳ ಹೇಳಿಕೆ ಪಡೆಯಲು ಇ.ಡಿ ಮುಂದಾಗಿದೆ ಎಂದು ಮೂಲಗಳು ಹೇಳಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT