ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತ್ರಿಶೂರ್‌ | ಮುಖ್ಯ ರೈಲಿನಿಂದ ಬೇರ್ಪಟ್ಟ ಎಂಜಿನ್‌, ಕೋಚ್‌

ತ್ರಿಶೂರ್‌ ರೈಲ್ವೆ ನಿಲ್ದಾಣದಲ್ಲಿ ನಡೆದ ಘಟನೆ
Published 28 ಜೂನ್ 2024, 11:19 IST
Last Updated 28 ಜೂನ್ 2024, 11:19 IST
ಅಕ್ಷರ ಗಾತ್ರ

ತ್ರಿಶೂರ್‌: ಎರ್ನಾಕುಲಂ–ಟಾಟಾನಗರ ಎಕ್ಸ್‌ಪ್ರೆಸ್‌ ರೈಲು ತ್ರಿಶೂರ್‌ ರೈಲು ನಿಲ್ದಾಣದ ಮೂಲಕ ಶುಕ್ರವಾರ ಬೆಳಿಗ್ಗೆ ಸಂಚರಿಸುವ ವೇಳೆ ಎಂಜಿನ್‌ ಹಾಗೂ ಕೆಲವು ಕೋಚ್‌ಗಳು ಬೇರ್ಪಟ್ಟಿದ್ದವು ಎಂದು ರೈಲ್ವೆ ಮೂಲಗಳು ತಿಳಿಸಿವೆ.

‘ರೈಲಿನ ಮೂರನೇ ಕೋಚ್‌ ಬೇರ್ಪಟ್ಟಿದ್ದು, ಬೆಳಿಗ್ಗೆ 9.30ರ ವೇಳೆಗೆ ಈ ಘಟನೆ ನಡೆದಿದೆ. ಸಮಸ್ಯೆ ಬಗೆಹರಿಸಿದ ಬಳಿಕ ಪ್ರಯಾಣ ಮುಂದುವರಿಸಲಾಯಿತು’ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.

‘ಘಟನೆ ನಡೆದ ವೇಳೆ ರೈಲು ನಿಧಾನವಾಗಿ ಚಲಿಸುತ್ತಿದ್ದರಿಂದ, ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ. ಎಂಜಿನ್‌ ಬೇರ್ಪಡಲು ಕಾರಣ ಇನ್ನಷ್ಟೇ ತಿಳಿಯಬೇಕಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT