ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಏಕ ಬಳಕೆ ಪ್ಲಾಸ್ಟಿಕ್ ಉತ್ಪಾದನೆಗೆ ಎಫ್‌ಎಂಸಿಜಿ ಉತ್ತೇಜನ; ಗ್ರೀನ್‌ ಪೀಸ್‌ ವರದಿ

Last Updated 14 ಸೆಪ್ಟೆಂಬರ್ 2021, 9:37 IST
ಅಕ್ಷರ ಗಾತ್ರ

ನವದೆಹಲಿ: ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ತಗ್ಗಿಸುವ ಪ್ರಯತ್ನಗಳು ನಡೆಯುತ್ತಿರುವ ನಡುವೆಯೇ, ಪರಿಸರ ವ್ಯವಸ್ಥೆಯನ್ನು ಹಾಳು ಮಾಡುವ ಪ್ಲಾಸ್ಟಿಕ್‌ ಉತ್ಪಾದನೆ ಹೆಚ್ಚಳಕ್ಕೆ ವೇಗವಾಗಿ ಮಾರಾಟವಾಗುವ ಗ್ರಾಹಕ ವಸ್ತು ತಯಾರಿಕಾ ಕಂಪನಿಗಳು (ಎಫ್‌ಎಂಸಿಜಿ) ಉತ್ತೇಜನ ನೀಡುತ್ತಿವೆ ಎಂಬ ಮಾಹಿತಿ ಬಹಿರಂಗವಾಗಿದೆ.

ಅಮೆರಿಕದ ಗ್ರೀನ್‌ ಪೀಸ್‌ ಸ್ವಯಂ ಸೇವಾ ಸಂಸ್ಥೆ ಸಿದ್ಧಪಡಿಸಿರುವ ‘ದಿ ಕ್ಲೈಮೇಟ್‌ ಎಮರ್ಜೆನ್ಸಿ ಅನ್‌ಪ್ಯಾಕ್ಡ್‌: ಹೌ ಕನ್ಸ್ಯೂಮರ್ ಗೂಡ್ಸ್‌ ಕಂಪನೀಸ್‌ ಆರ್‌ ಫ್ಯೂಯೆಲಿಂಗ್‌ ಬಿಗ್‌ ಆಯಿಲ್ಸ್‌ ಪ್ಲಾಸ್ಟಿಕ್‌ ಎಕ್ಸ್‌ಪ್ಯಾನ್ಷನ್‌‘ ಎಂಬ ಶೀರ್ಷಿಕೆಯ ಈ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ.

ಎಫ್‌ಎಂಸಿಜಿ ಕಂಪನಿಗಳುವಿಶ್ವದಾದ್ಯಂತವಿರುವ ಪಳೆಯುಳಿಕೆ ಇಂಧನ ಕೈಗಾರಿಕೆಗಳೊಂದಿಗೆ ‘ಏಕ ಬಳಕೆ ಪ್ಲಾಸ್ಟಿಕ್‌ ಬಳಕೆ‘ ನಿಷೇಧ ಕಾಯ್ದೆಯನ್ನು ರದ್ಧತಿಗೂ ಹೋರಾಟ ನಡೆಸುತ್ತಿವೆ ಎಂದು ಈ ವರದಿಯಲ್ಲಿ ಆರೋಪಿಸಲಾಗಿದೆ.

ಏಕ ಬಳಕೆ ಪ್ಲಾಸ್ಟಿಕ್‌ನಿಂದಾಗುವ ಸಮಸ್ಯೆಗಳಿಗೆ 'ರಾಸಾಯನಿಕ ಅಥವಾ ಸುಧಾರಿತ ಮರುಬಳಕೆ'ಯಂತಹ ಕ್ರಮಗಳಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ಈ ದೈತ್ಯ ಕಂಪನಿಗಳು ಮತ್ತು ಕೈಗಾರಿಕೆಗಳು ಸುಳ್ಳು ಪರಿಹಾರ ನೀಡುತ್ತಿವೆ ಎಂದು ವರದಿ ಹೇಳಿದೆ.

ಏಕ-ಬಳಕೆಯ ಪ್ಲಾಸ್ಟಿಕ್ ಪ್ಯಾಕೇಜಿಂಗ್‌ನ ಅತಿದೊಡ್ಡ ಖರೀದಿದಾರರರಾಗಿರುವ ಕೋಕಾ-ಕೋಲಾ, ನೆಸ್ಲೆ ಮತ್ತು ಪೆಪ್ಸಿಕೊದಂತಹ ದೈತ್ಯ ಎಫ್‌ಎಂಸಿಜಿ ಕಂಪನಿಗಳು, ಈ ಪ್ಲಾಸ್ಟಿಕ್ ಉತ್ಪಾದನೆಯ ವಿಸ್ತರಣೆಗೆ ಚಾಲನೆ ನೀಡುತ್ತಿವೆ. ಈ ವಿಸ್ತರಣೆಯು ಜಾಗತಿಕ ತಾಪಮಾನ ಹೆಚ್ಚಳ ಹಾಗೂ ಸಮುದಾಯ ಮತ್ತು ಜಾಗತಿಕ ಮಟ್ಟದ ಪರಿಸರ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತದೆ‘ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಎಫ್‌ಎಂಸಿಜಿ ಕಂಪನಿಗಳು ಮತ್ತು ತೈಲ ಮತ್ತು ಅನಿಲ ಉತ್ಪಾದನಾ ಉದ್ಯಮಗಳ ನಡುವಿನ ವ್ಯಾಪಾರ ಸಂಬಂಧ ಹಾಗೂ ಲಾಬಿಗಳ ಪ್ರಯತ್ನವನ್ನು ಬಹಿರಂಗಪಡಿಸಲಾಗಿದೆ. ಈ ಕಂಪನಿಗಳು ಏಕ ಬಳಕೆ ಪ್ಲಾಸ್ಟಿಕ್‌ ಪ್ಯಾಕೇಜಿಂಗ್ ಬಳಕೆ ಯನ್ನು ಕಡಿಮೆ ಮಾಡುವಲ್ಲಿ ವಿಫಲವಾಗಿರುವುದನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ ಏಕ ಬಳಕೆ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಸ್ಥಗಿತಗೊಳಿಸುವಂತೆ ನಾವು ಕಂಪನಿಗಳನ್ನು ಒತ್ತಾಯಿಸುತ್ತೇವೆ. ಮರುಬಳಕೆಯಾಗುವ ವಸ್ತುಗಳನ್ನು ಉತ್ಪಾದಿಸಬೇಕು ಹಾಗೂ ಪ್ಯಾಕೇಜ್‌ ಮುಕ್ತವಾಗಿರುವ ಉತ್ಪನ್ನಗಳನ್ನು ತಯಾರಿಸುವಂತೆ ವರದಿಯಲ್ಲಿ ಆಗ್ರಹಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT