ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ಮುಂಗಾರು ಪ್ರವೇಶದ ಮೇಲೆ ಬೀರಲಿದೆ ಪ್ರಭಾವ

Published 5 ಜೂನ್ 2023, 15:50 IST
Last Updated 5 ಜೂನ್ 2023, 15:50 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಚಂಡಮಾರುತದ ಪರಿಚಲನೆಯಿಂದಾಗಿ ಆಗ್ನೇಯ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ಇದು ಮುಂದಿನ ಎರಡು ದಿನಗಳಲ್ಲಿ ತೀವ್ರತೆ ಪಡೆಯಲಿದೆ. ಕೇರಳದ ಕರಾವಳಿ ಪ್ರವೇಶಿಸಲಿರುವ ಮಾನ್ಸೂನ್‌ ಮಾರುತಗಳ ಮೇಲೆ ಇದು ಪರಿಣಾಮ ಬೀರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ಹೇಳಿದೆ.

ಆಗ್ನೇಯ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತು ಉತ್ತರ ದಿಕ್ಕಿನತ್ತ ಚಲಿಸುತ್ತಿರುವ ಚಂಡಮಾರುತಗಳು ಕೇರಳ ಕರಾವಳಿಯ ಕಡೆಗೆ ನೈರುತ್ಯ ಮುಂಗಾರು ಪ್ರವೇಶವನ್ನು ತೀವ್ರವಾಗಿ ಪ್ರಭಾವಿಸುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.

ಆದಾಗ್ಯೂ, ಮುಂಗಾರು ಮಾರುತಗಳು ಕೇರಳ ಪ್ರವೇಶಿಸಲಿರುವ ಅಂದಾಜು ದಿನಾಂಕವನ್ನು ಐಎಂಡಿ ತಿಳಿಸಿಲ್ಲ. 

ನೈರುತ್ಯ ಮುಂಗಾರು ಜೂನ್‌ 1ರಂದು ಕೇರಳ ಪ್ರವೇಶಿಸುವುದು ವಾಡಿಕೆ. ಈ ಬಾರಿ ಸುಮಾರು ಏಳು ದಿನಗಳು ವಿಳಂಬವಾಗುತ್ತಿದೆ. ಈ ಬಾರಿ ಜೂ.4ರಂದು ಪ್ರವೇಶಿಸಲಿದೆ ಎಂದು ಐಎಂಡಿಯು ಕಳೆದ ಮೇ ತಿಂಗಳ ಮಧ್ಯೆ ಹೇಳಿತ್ತು.  

ಆಗ್ನೇಯ ಮಾನ್ಸೂನ್ ಕಳೆದ ವರ್ಷ ಮೇ 29ರಂದು ಕೇರಳ ಪ್ರವೇಶಿಸಿದ್ದರೆ, 2021ರಲ್ಲಿ ಜೂನ್ 3, 2020ರಲ್ಲಿ ಜೂನ್ 1, 2019ರಲ್ಲಿ ಜೂನ್‌ 8 ಹಾಗೂ 2018ರಲ್ಲಿ ಮೇ 29ರಂದು ಪ್ರವೇಶಿಸಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT