ಲಖನೌ: ಕಳೆದ ತಿಂಗಳು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಅಡ್ಡ ಮತದಾನ ಮಾಡಿದ್ದ ಸಮಾಜವಾದಿ ಪಕ್ಷದ ನಾಲ್ವರು ಶಾಸಕರಿಗೆ ’ವೈ‘ ಶ್ರೇಣಿಯ ಭದ್ರತೆ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಗೋಸಾಯಿಗಂಜ್ ವಿಧಾನಸಭಾ ಕ್ಷೇತ್ರದ ಶಾಸಕ ಅಭಯ್ ಸಿಂಗ್, ಮನೋಜ್ಕುಮಾರ್ ಪಾಂಡೆ (ಊಂಚಹಾರ್), ರಾಕೇಶ್ ಪ್ರತಾಪ್ ಸಿಂಗ್ (ಗೌರಿಗಂಜ್) ಹಾಗೂ ವಿನೋದ್ ಚತುರ್ವೇದಿ (ಕಲ್ಪಿ) ಅವರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದಿದ್ದಾರೆ.

ಅಭಯ್ ಸಿಂಗ್ ಅವರಿಗೆ ಶುಕ್ರವಾರದಿಂದಲೇ ಭದ್ರತೆ ನೀಡಿದ್ದರೆ, ಉಳಿದ ಶಾಸಕರಿಗೆ ಶನಿವಾರ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ನಾಲ್ವರು ಶಾಸಕರ ಜೊತೆಗೆ ಬೇರೆ ಪಕ್ಷಗಳ ಶಾಸಕರಾದ ಪೂಜಾ ಪಾಲ್, ರಾಕೇಶ್ ಪಾಂಡೆ ಮತ್ತು ಆಶುತೋಷ್ ಮೌರ್ಯ ಅವರು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಂಜಯ್ ಸೇಠ್ ಅವರಿಗೆ ಮತ ಹಾಕುವ ಮೂಲಕ, ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿದ್ದ ಅಲೋಕ್ ರಂಜನ್ ಸೋಲಿಗೆ ಕಾರಣರಾಗಿದ್ದರು.

ಶಾಸಕ ರಾಕೇಶ್ ಪಾಂಡೆ ಅವರು ಈಚೆಗಷ್ಟೇ ಬಿಎಸ್ಪಿಯಿಂದ ಬಿಜೆಪಿಗೆ ಸೇರ್ಪಡೆಯಾದ ಸಂಸದ ರಿತೇಶ್ ಪಾಂಡೆ ಅವರ ಪುತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.