ಶ್ರೀನಗರ (ಪಿಟಿಐ): ‘ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹಿಳೆಯೊಬ್ಬರ ವೈಯಕ್ತಿಕ ಘನತೆಗೆ ಚ್ಯುತಿ ತಂದಿದ್ದಾರೆ. ನೈತಿಕ ಚೌಕಟ್ಟಿನ ಎಲ್ಲೆ ಮೀರಿದ್ದಾರೆ’ ಎಂದು ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವಾಯಿಜ್ ಉಮರ್ ಫಾರೂಕ್ ಶುಕ್ರವಾರ ಕಿಡಿಕಾರಿದ್ದಾರೆ.

ನಗರದ ಜಾಮಿಯಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಶ್ಮೀರದ ಧರ್ಮಗುರು, ‘ಮುಸ್ಲಿಂ ಮಹಿಳೆಯೊಬ್ಬರು ಮುಖಕ್ಕೆ ಧರಿಸಿದ್ದ ನಖಾಬ್ ಅನ್ನು (ಮುಸುಕು) ನಿತೀಶ್ ಅವರು ಎಳೆದಿದ್ದು ಖಂಡನೀಯ’ ಎಂದಿದ್ದಾರೆ.

‘ಯಾವುದೇ ಅಧಿಕಾರ, ಸ್ಥಾನವು ಮತ್ತೊಬ್ಬರ ಸ್ವಾಭಿಮಾನಕ್ಕೆ ಅಡ್ಡಿ ಮಾಡುವ ಹಕ್ಕನ್ನು ನೀಡುವುದಿಲ್ಲ’ ಎಂದೂ ಹೇಳಿದ್ದಾರೆ.

‘ನಖಾಬ್ ಧರಿಸುವ ಮುಸ್ಲಿಂ ಮಹಿಳೆಯರಿಗೆ ಇದು ನಂಬಿಕೆ, ಗುರುತು ಮತ್ತು ವೈಯಕ್ತಿಕ ಆಯ್ಕೆಯ ವಿಷಯವಾಗಿದೆ’ ಎಂದಿರುವ ಅವರು, ಮಹಿಳೆಯರ ಕ್ಷಮೆಯಾಚಿಸುವಂತೆ ನಿತೀಶ್ ಅವರನ್ನು ಒತ್ತಾಯಿಸಿದ್ದಾರೆ.

ಆಯುಷ್ ವೈದ್ಯರು ತಮ್ಮ ನೇಮಕಾತಿ ಪತ್ರಗಳನ್ನು ಸ್ವೀಕರಿಸಲು ಪಟ್ನಾದಲ್ಲಿರುವ ಮುಖ್ಯಮಂತ್ರಿ ಕಾರ್ಯಾಲಯದಲ್ಲಿ ಸೋಮವಾರ ಒಟ್ಟುಗೂಡಿದ್ದಾಗ, ನಿತೀಶ್ ಅವರು ಮಹಿಳೆಯೊಬ್ಬರು ಮುಖಕ್ಕೆ ಧರಿಸಿದ್ದ ನಖಾಬ್ನ್ನು ಎಳೆದಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದೆ.

ನೇಮಕಾತಿ ಪತ್ರವನ್ನು ಸ್ವೀಕರಿಸಲಿಕ್ಕಾಗಿ ಮಹಿಳೆಯೊಬ್ಬರು ಬಂದಾಗ ನಿತೀಶ್ ಅವರು ನಖಾಬ್ನ್ನು ನೋಡಿ, ಇದು ಏನು ಎಂದಿದ್ದಾರೆ. ಅವರು ಉತ್ತರಿಸುವ ಮುನ್ನವೇ ಮುಖಕ್ಕೆ ಧರಿಸಿದ್ದ ನಖಾಬ್ನ್ನು ಎಳೆದಿದ್ದಾರೆ.

ವಿರೋಧ ಪಕ್ಷಗಳು ಮುಖ್ಯಮಂತ್ರಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.