ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜಸ್‌ ಯುದ್ಧವಿಮಾನ ರಫ್ತು: ಮೂರು ದೇಶಗಳ ಜೊತೆ ಎಚ್‌ಎಎಲ್‌ ಚರ್ಚೆ

Published 7 ಡಿಸೆಂಬರ್ 2023, 16:31 IST
Last Updated 7 ಡಿಸೆಂಬರ್ 2023, 16:31 IST
ಅಕ್ಷರ ಗಾತ್ರ

ನವದೆಹಲಿ: ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ‘ತೇಜಸ್ ಎಂಕೆ–1’ ಯುದ್ಧ ವಿಮಾನದ ರಫ್ತು ಕುರಿತಂತೆ ನೈಜೀರಿಯಾ ಸೇರಿದಂತೆ ಮೂರು ರಾಷ್ಟ್ರಗಳ ಜತೆಗೆ ಹಿಂದುಸ್ತಾನ್‌ ಏರೊನಾಟಿಕ್ಸ್ ಲಿಮಿಟೆಡ್‌ (ಎಚ್‌ಎಎಲ್‌) ಚರ್ಚೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ನೈಜೀರಿಯಾ ಜೊತೆಗಿನ ಚರ್ಚೆಯು ಈಗ ಆರಂಭಿಕ ಹಂತದಲ್ಲಿದೆ. ಈಜಿಪ್ಟ್‌ ಮತ್ತು ಅರ್ಜೆಂಟೀನಾ ಜೊತೆಗೆ ಮಾತುಕತೆ ನಡೆದಿದೆ. ಈ ಎರಡೂ ದೇಶಗಳ ಅಧಿಕಾರಿಗಳು ಈ ವರ್ಷದ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು’ ಎಂದು ಬೆಂಗಳೂರು ಮೂಲದ ಎಚ್‌ಎಎಲ್‌ ತಿಳಿಸಿದೆ.

‘ಆರಂಭಿಕವಾಗಿ ಅರ್ಜೆಂಟೀನಾಗೆ 15, ಈಜಿಪ್ಟ್‌ಗೆ 20 ಯುದ್ಧ ವಿಮಾನ ಮಾರುವ ಗುರಿಯಿದೆ. ಉಳಿದಂತೆ ಅಮೆರಿಕ, ಆಸ್ಟ್ರೇಲಿಯಾ, ಇಂಡೊನೇಷಿಯಾ, ಫಿಲಿಪ್ಪೀನ್ಸ್‌ ಕೂಡಾ ಎಲ್‌ಸಿಎ ಖರೀದಿಗೆ ಆಸಕ್ತಿ ತೋರಿವೆ’ ಎಂದು ಎಚ್‌ಎಎಲ್ ಅಧ್ಯಕ್ಷ ಸಿ.ಇ.ಅನಂತಕೃಷ್ಣನ್‌ ತಿಳಿಸಿದ್ದಾರೆ.

‘ತೇಜಸ್‌’ –ಲಘು ಯುದ್ಧ ವಿಮಾನವು ಒಂದೇ ಎಂಜಿನ್‌ ಅನ್ನು ಅಳವಡಿಸಿರುವ,  ಗಂಭೀರ ಸ್ವರೂಪದ ವಾತಾವರಣದಲ್ಲಿಯೂ ಕಾರ್ಯ ನಿರ್ವಹಿಸಬಹುದಾದ ಬಹು ಸಾಮರ್ಥ್ಯದ ಯುದ್ಧ ವಿಮಾನವಾಗಿದೆ ಎಂದು ತಿಳಿಸಿದರು.

ಈ ಹಿಂದೆ ಎಚ್‌ಎಎಲ್,  18 ಎಲ್‌ಸಿಎ ಪೂರೈಸಲು ಮಲೇಷಿಯಾದ ರಕ್ಷಣಾ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಈ ಸಂಬಂಧ ರಾಯಲ್‌ ಮಲೇಷಿಯಾ ಏರ್‌ಫೋರ್ಸ್‌ ಜಾಗತಿಕ ಟೆಂಡರ್ ಸಲ್ಲಿಸಿತ್ತು. ಅಂತಿಮ ಹಂತದಲ್ಲಿ ಈ ಪ್ರಸ್ತಾಪವು ಎಚ್‌ಎಎಲ್‌ ಕೈತಪ್ಪಿತ್ತು.

ಇದರ ಹೊರತಾಗಿ ಮಿಷನ್‌ ಕಂಪ್ಯೂಟರ್ಸ್‌ಗಳು, ದಿಕ್ಸೂಚಿ ಪರಿಕರಗನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡುವ ಗುರಿ ಹೊಂದಿದೆ. ಜಾಗತಿಕವಾಗಿ ಇದರ ಮಾರುಕಟ್ಟೆಯು 2030ರ ವೇಳೆಗೆ 70 ಬಿಲಿಯನ್‌ ಡಾಲರ್‌ಗೆ ಮುಟ್ಟುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT