ಚಂಡೀಗಢ: ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಪಕ್ಷದ 13 ನಾಯಕರನ್ನು ಹರಿಯಾಣ ಕಾಂಗ್ರೆಸ್ ಶುಕ್ರವಾರ ಉಚ್ಛಾಟನೆ ಮಾಡಿದೆ.
ಪಕ್ಷದಲ್ಲಿ ಅಶಿಸ್ತನ್ನು ನಿಯಂತ್ರಿಸಲು ತಕ್ಷಣದಿಂದಲೇ ಅವರನ್ನು ಆರು ವರ್ಷಗಳ ಕಾಲ ಉಚ್ಛಾಟಿಸಲಾಗಿದೆ ಎಂದು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಉದಯ್ ಬಾನು ತಿಳಿಸಿದ್ದಾರೆ.
ನರೇಶ್ ಧಾಂಡೆ, ಪ್ರದೀಪ್ ಗಿಲ್, ಸಜ್ಜನ್ ಸಿಂಗ್ ಧುಲ್, ಸುನೀತಾ ಬಟ್ಟನ್, ರಾಜೀವ್ ಮಾಮುರಾಮ್ ಗೊಂಡಾರ್, ದಯಾಲ್ ಸಿಂಗ್ ಸಿರೋಹಿ, ವಿಜಯ್ ಜೈನ್, ದಿಲ್ಬಾಗ್ ಸಂಡಿಲ್, ಅಜಿತ್ ಫೋಗಟ್, ಅಭಿಜೀತ್ ಸಿಂಗ್, ಸತ್ಬೀರ್ ರಾಟೇರಾ, ನೀತು ಮಾನ್, ಅನಿತಾ ಧುಲ್ ಅವರನ್ನು ಉಚ್ಛಾಟಿಸಲಾಗಿದೆ.