ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆಗೆ ಜನನಾಯಕ ಜನತಾ ಪಕ್ಷ(ಜೆಜೆಪಿ) ಮತ್ತು ಆಜಾದ್ ಸಮಾಜ ಪಕ್ಷಗಳ(ಎಎಸ್‌ಪಿ) ಮೈತ್ರಿಕೂಟವು 12 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಸೋಮವಾರ ಬಿಡುಗಡೆಗೊಳಿಸಿದೆ.
ಹರಿಯಾಣ ವಿಧಾನಸಭೆಯ ಒಟ್ಟು 90 ಸ್ಥಾನಗಳಲ್ಲಿ ಜೆಜೆಪಿಯು 70 ಸ್ಥಾನಗಳಲ್ಲಿ ಮತ್ತು ಎಎಸ್‌ಪಿಯು 20 ಸ್ಥಾನಗಳಲ್ಲಿ ಸ್ಫರ್ಧಿಸಲಿದೆ.
ಜೆಜೆಪಿ–ಎಎಸ್‌ಪಿ ಮೈತ್ರಿಕೂಟವು ಸೆ.4ರಂದು 19 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು.