ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು–ಕಾಶ್ಮೀರ: ಇಬ್ಬರು ಹೈಬ್ರಿಡ್‌ ಭಯೋತ್ಪಾದಕರ ಬಂಧನ

Last Updated 1 ಮೇ 2022, 13:45 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ ಮತ್ತು ಶ್ರೀನಗರ ಜಿಲ್ಲೆಗಳಲ್ಲಿ ಲಷ್ಕರ್‌–ಎ–ತೈಯಬಾ (ಎಲ್‌ಇಟಿ) ಸಂಘಟನೆಗೆ ಸೇರಿದ ಇಬ್ಬರು ಹೈಬ್ರಿಡ್‌ ಭಯೋತ್ಪಾದಕರನ್ನು ಭಾನುವಾರ ಭದ್ರತಾ ದಳ ಬಂಧಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಗಡಿಹಾಮ್‌ ಕುಲ್ಗಮ್‌ ಪ್ರದೇಶಕ್ಕೆ ಸೇರಿದ ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‌ಇಟಿಯ ಹೈಬ್ರಿಡ್‌ ಭಯೋತ್ಪಾದಕ ಯಾಮಿನ್‌ ಯೂಸುಫ್‌ ಭಟ್‌ನನ್ನು ಕುಲ್ಗಾಮ್‌ ಪೊಲೀಸ್‌ ಮತ್ತು ಸೇನೆಯ ತಂಡ ಬಂಧಿಸಿದೆ’ ಎಂದು ಕಾಶ್ಮೀರ ವಲಯದ ಪೊಲೀಸ್‌ ತನ್ನ ಟ್ವಿಟರ್‌ನಲ್ಲಿ ಹೇಳಿದೆ.

ಬಂಧಿತನಿಂದ ಒಂದು ಪಿಸ್ತೂಲ್‌, ಎರಡು ಗ್ರೆನೇಡ್‌, 51 ಪಿಸ್ತೂಲ್‌ ಗುಂಡುಗಳು, ಅಕ್ರಮ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

‘ಖಚಿತ ಮಾಹಿತಿ ಮೇರೆಗೆ ಇಲ್ಲಿಯನೌಗಾಮ್‌ನಿಂದ ಮುಚ್ವಾ, ಬದ್ಗಾಮ್‌ನ ಶೇಖ್ ಸಾಹಿದ್ ಗುಲ್ಜಾರ್ ಎಂಬ ಮತ್ತೊಬ್ಬ ಹೈಬ್ರಿಡ್‌ ಭಯೋತ್ಪಾದಕನನ್ನು ಶ್ರೀನಗರ ಪೊಲೀಸರು ಬಂಧಿಸಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

ಈತನಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT