ಅಹಮದಾಬಾದ್: ‘₹100 ಕೋಟಿ ಆರಂಭಿಕ ಮೊತ್ತದೊಂದಿಗೆ ‘ಐಐಎಂ ಅಹಮದಾಬಾದ್ ದತ್ತಿನಿಧಿ’ ಸ್ಥಾಪನೆ ಮಾಡಿರುವುದನ್ನು ಅಹಮದಾಬಾದ್‌ನ ಐಐಎಂ ಮಂಗಳವಾರ ಪ್ರಕಟಿಸಿದೆ. 10 ಮಂದಿ ಹಿರಿಯ ವಿದ್ಯಾರ್ಥಿಗಳು ಆರಂಭಿಕ ಮೊತ್ತ ಒದಗಿಸಿದ್ದಾರೆ.

ಶಿಕ್ಷಣ ಸಂಸ್ಥೆಯೊಂದು ಹೀಗೆ ದತ್ತಿ ನಿಧಿ ಸ್ಥಾಪಿಸಿರುವುದು ಇದೇ ಮೊದಲು. ಮುಂದಿನ ಐದು ವರ್ಷಗಳಲ್ಲಿ ಮೊತ್ತವನ್ನು ₹ 1000 ಕೋಟಿಗೆ ಏರಿಸುವ ಗುರಿ ಇದೆ ಎಂದು ಐಐಎಂಎ ಹೇಳಿಕೆಯಲ್ಲಿ ತಿಳಿಸಿದೆ.

ದತ್ತಿನ ನಿಧಿಯು ಯಾವುದೇ ಶಿಕ್ಷಣ ಸಂಸ್ಥೆಯ ಆರ್ಥಿಕ ಆರೋಗ್ಯವನ್ನು ಬಿಂಬಿಸಲಿದೆ. ಈ ಮೂಲಕ ಸ್ವಾವಲಂಬಿಯಾಗಿ ಬೆಳೆಯಲು ಸಹಕಾರಿ ಆಗಲಿದೆ. ಸ್ವಾಯತ್ತೆ ರಕ್ಷಣೆಯ ಜೊತೆಗೆ ದೀರ್ಘಾವಧಿ ಗುರಿ ಸಾಧನೆಗೂ ಇಂಥ ನಿಧಿಯು ಅನುಕೂಲಕರ’ ಎಂದು ಐಐಎಂಎ ಆಡಳಿತ ಮಂಡಳಿಯ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ ಅವರು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.