ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಗಪುರದ 7 ಉಪಗ್ರಹಗಳನ್ನು ಕಕ್ಷೆ ಸೇರಿಸಿದ ಇಸ್ರೊ ರಾಕೆಟ್

Published 30 ಜುಲೈ 2023, 4:33 IST
Last Updated 30 ಜುಲೈ 2023, 4:33 IST
ಅಕ್ಷರ ಗಾತ್ರ

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಭಾನುವಾರ ವಾಣಿಜ್ಯ ಮಿಷನ್‌ನ ಪಿಎಸ್‌ಎಲ್‌ವಿ-ಸಿ 56/ಡಿಎಸ್-ಎಸ್‌ಎಆರ್ ರಾಕೆಟ್ ಉಡ್ಡಯನವನ್ನು ಯಶಸ್ವಿಯಾಗಿ ನಡೆಸಿದೆ. ಎಲ್ಲ ಏಳು ಉಪಗ್ರಹಗಳನ್ನು ನಿಖರವಾಗಿ ಅವುಗಳ ಉದ್ದೇಶಿತ ಕಕ್ಷೆಗೆ ಸೇರಿಸಿದೆ.

ಪ್ರಮುಖ ಉಪಗ್ರಹ - 360 ಕೆ.ಜಿ ತೂಕ‌ದ ಡಿಎಸ್‌-ಎಸ್‌ಎಆರ್‌ ಮತ್ತು ಉಳಿದ ಆರು ಉಪಗ್ರಹಗಳು ಸಿಂಗಪುರಕ್ಕೆ ಸೇರಿದ್ದವುಗಳಾಗಿವೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಲಾಂಚ್ ಪ್ಯಾಡ್‌ನಿಂದ ಬೆಳಿಗ್ಗೆ 6.30ಕ್ಕೆ ಉಡ್ಡಯನ ನಡೆದಿದೆ.

ಸಿಂಗಪುರದ ಎಸ್‌ಟಿ ಇಂಜಿನಿಯರಿಂಗ್‌ ಸಂಸ್ಥೆಗಾಗಿ ಇಸ್ರೊದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಈ ಕಾರ್ಯಾಚರಣೆಯನ್ನು ನಡೆಸಿದೆ. ಡಿಎಸ್‌-ಎಸ್‌ಎಆರ್ ಉಪಗ್ರಹವನ್ನು ಸಿಂಗಪುರ ಸರ್ಕಾರದ ಅಡಿಯಲ್ಲಿ ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಡಿಎಸ್‌ಟಿಎ) ಮತ್ತು ಎಸ್‌ಟಿ ಇಂಜಿನಿಯರಿಂಗ್ ನಡುವಿನ ಪಾಲುದಾರಿಕೆಯ ಭಾಗವಾಗಿ ಅಭಿವೃದ್ಧಿಪಡಿಸಲಾಗಿದೆ.

ಡಿಎಸ್‌-ಎಸ್‌ಎಆರ್ ಉಪಗ್ರಹವು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಅಭಿವೃದ್ಧಿಪಡಿಸಿರುವ ಸಿಂಥೆಟಿಕ್ ಅಪರ್ಚರ್ ರಾಡಾರ್ (ಎಸ್‌ಎಆರ್) ಪೇಲೋಡ್ ಅನ್ನು ಹೊಂದಿದೆ.

ಸಿಂಗಪುರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಏಜೆನ್ಸಿಗಳ ಉಪಗ್ರಹ ಚಿತ್ರಣ ಅಗತ್ಯತೆಗಳನ್ನು ಪೂರೈಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಎಸ್‌ಟಿ ಇಂಜಿನಿಯರಿಂಗ್ ತಮ್ಮ ವಾಣಿಜ್ಯ ಗ್ರಾಹಕರಿಗೆ ಬಹು ಮಾದರಿ ಮತ್ತು ಹೈ ರೆಸಲ್ಯೂಶನ್ ಚಿತ್ರಣ ಹಾಗೂ ಜಿಯೋಸ್ಪೇಷಿಯಲ್ ಸೇವೆಗಳಿಗಾಗಿ ಈ ಉಪಗ್ರಹವನ್ನು ಬಳಸುತ್ತದೆ ಎಂದು ಇಸ್ರೊ ಹೇಳಿದೆ. ಡಿಎಸ್‌-ಎಸ್‌ಎಆರ್ ಎಲ್ಲಾ ಹವಾಗುಣದಲ್ಲಿ ಹಗಲು-ರಾತ್ರಿಯ ಸೇವೆ ಒದಗಿಸುತ್ತದೆ ಮತ್ತು ಪೂರ್ಣ ಧ್ರುವೀಯತೆಯಲ್ಲಿ 1m-ರೆಸಲ್ಯೂಶನ್‌ನಲ್ಲಿ ಚಿತ್ರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ.

10 ಕೆಜಿಗಿಂತ ಕಡಿಮೆ ತೂಕವಿರುವ ಮೂರು ನ್ಯಾನೊಸ್ಯಾಟಲೈಟ್‌ಗಳು ಒಳಗೊಂಡಂತೆ ಇನ್ನೂ ಆರು ಉಪಗ್ರಹಗಳನ್ನು ಇದರ ಜೊತೆಗೆ ಕಕ್ಷೆ ತಲುಪಿಸಲಾಗಿದೆ. ವೆಲೊಕ್ಸ್–ಎಎಂ ಉಪಗ್ರಹವು ಇದು ಸಂಯೋಜಕ ಉತ್ಪಾದನಾ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ, ಆರ್ಕೆಡ್ ಒಂದು ಪ್ರಾಯೋಗಿಕ ಉಪಗ್ರಹ, ಸ್ಕೂಬ್-II ತಂತ್ರಜ್ಞಾನ ಡಿಮಾನ್‌ಸ್ಟ್ರೇಟರ್ ಪೇಲೋಡ್, ನೂಲಯನ್, ತಡೆರಹಿತ IoT ಸಂಪರ್ಕವನ್ನು ಸಕ್ರಿಯಗೊಳಿಸಲು ವಿನ್ಯಾಸಗೊಳಿಸಲಾಗಿದೆ, ಗ್ಯಾಲಾಸಿಯಾ-2 ಇದು ಬಾಹ್ಯಾಕಾಶ ಅಪ್ಲಿಕೇಶನ್‌ಗಳಿಗಾಗಿ ಮಲ್ಟಿಸ್ಪೆಕ್ಟ್ರಲ್ ಚಿತ್ರಣದಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಬಳಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT