ಸಿಯಾಟಲ್: ಪೊಲೀಸ್ ಅಧಿಕಾರಿ ಚಲಾಯಿಸುತ್ತಿದ್ದ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂದುಲ (23) ಅವರ ಕುಟುಂಬಕ್ಕೆ ಅಮೆರಿಕದ ಸಿಯಾಟಲ್ನ ಸ್ಥಳೀಯಾಡಳಿತ 29 ದಶಲಕ್ಷ ಡಾಲರ್ (₹262 ಕೋಟಿ) ಪರಿಹಾರ ಘೋಷಿಸಿದೆ.

2023ರಲ್ಲಿ ಈ ಘಟನೆ ನಡೆದಿತ್ತು. ಗಂಟೆಗೆ 40 ಕಿ.ಮೀ. ವೇಗದಲ್ಲಿ ಚಲಿಸಬೇಕಿದ್ದ ವಲಯದಲ್ಲಿ ಪೊಲೀಸ್ ಅಧಿಕಾರಿ ಕೆವಿನ್ ಡೇವ್ ಅವರು 119 ಕಿ.ಮೀ. ವೇಗದಲ್ಲಿ ವಾಹನ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿತ್ತು. ರಸ್ತೆ ದಾಟುತ್ತಿದ್ದ ಜಾಹ್ನವಿ ಅವರಿಗೆ ವಾಹನ ಡಿಕ್ಕಿಯಾಗಿತ್ತು. ಮಾದಕವಸ್ತುವಿಗೆ ಸಂಬಂಧಿಸಿದ ತುರ್ತು ಕರೆಗೆ ಸ್ಪಂದಿಸಲು ಪೊಲೀಸ್ ಅಧಿಕಾರಿ ಧಾವಿಸುತ್ತಿದ್ದಾಗ ದುರ್ಘಟನೆ ನಡೆದಿತ್ತು.

‘ಚಾಲನೆ ವೇಳೆ ಪೊಲೀಸ್ ಅಧಿಕಾರಿ ವಾಹನದ ಸೈರನ್ ಮತ್ತು ಎಮರ್ಜೆನ್ಸಿ ಲೈಟ್ಗಳನ್ನು ಹಾಕಿದ್ದರು. ಆದರೆ, ಅತಿಯಾದ ವೇಗದಿಂದ ಅಪಘಾತ ಸಂಭವಿಸಿದೆ. ವಿದ್ಯಾರ್ಥಿನಿಯ ಸಾವು ಹೃದಯವಿದ್ರಾವಕವಾಗಿತ್ತು. ಈಗಿನ ಹಣಕಾಸು ಪರಿಹಾರವು, ಅವರ ಕುಟುಂಬಕ್ಕೆ ಸ್ವಲ್ಪ ಮಟ್ಟಿಗಿನ ನೆಮ್ಮದಿಯನ್ನಾದರೂ ತಂದುಕೊಡುತ್ತದೆ ಎಂದು ಆಶಿಸುತ್ತೇವೆ’ ಎಂದು ಸಿಯಾಟಲ್ನ ಅಟಾರ್ನಿ ಎರಿಕಾ ಇವಾನ್ಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹ್ನವಿ ಅವರು ಸಿಯಾಟಲ್ನ ನಾರ್ಥ್ ಈಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಇನ್ಫಾರ್ಮೇಷನ್ ಸಿಸ್ಟಮ್ಸ್ನಲ್ಲಿ (ಐ.ಎಸ್) ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದರು.

‘ಅಪಘಾತ ನಡೆದ ನಂತರ, ‘ಆಕೆಯ ಜೀವಕ್ಕೆ ಸೀಮಿತ ಮೌಲ್ಯವಿತ್ತು. ಈ ನಗರವು ಇನ್ನೊಂದು ಪರಿಹಾರದ ಚೆಕ್ ಬರೆಯಬೇಕಷ್ಟೇ’ ಎಂದು ಇನ್ನೊಬ್ಬ ಅಧಿಕಾರಿ, ಡೇನಿಯಲ್ ಆಡರರ್ ನೀಡಿದ್ದ ಹೇಳಿಕೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಅಮೆರಿಕದಲ್ಲಿನ ಭಾರತದ ರಾಯಭಾರ ಕಚೇರಿಯೂ ಪ್ರಕರಣದ ತನಿಖೆಗೆ ಒತ್ತಾಯಿಸಿತ್ತು. ಅಮೆರಿಕದ ಪೊಲೀಸ್ ಇಲಾಖೆಯು ಈ ಇಬ್ಬರನ್ನೂ ಕೆಲಸದಿಂದ ವಜಾಗೊಳಿಸಿತ್ತು.

ಘೋಷಣೆ ಆಗಿರುವ ಪರಿಹಾರದ ಬಗ್ಗೆ ಜಾಹ್ನವಿ ಅವರ ಕುಟುಂಬವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.