ತಿರುವನಂತಪುರ: ವಯನಾಡ್‌ನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಸಂಕಷ್ಟಕ್ಕೀಡಾದ ಗ್ರಾಮದ ಜನರ ಸಾಲವನ್ನು ಮನ್ನಾ ಮಾಡುವುದಾಗಿ ಕೇರಳ ಬ್ಯಾಂಕ್ ಹೇಳಿದೆ.
ಜಿಲ್ಲಾ ಸಹಕಾರಿ ಬ್ಯಾಂಕ್‌ಗಳ ಕೇಂದ್ರೀಕೃತ ವ್ಯವಸ್ಥೆಯಾಗಿರುವ ಆಗಿರುವ ಕೇರಳ ಬ್ಯಾಂಕ್
ಅಧಿಕೃತ ಹೇಳಿಕೆಯ ಪ್ರಕಾರ, ‘ಚೂರಲ್‌ಮಲ ಶಾಖೆಯಿಂದ ಸಾಲ ಪಡೆದವರ ಮತ್ತು ಮನೆ ಮತ್ತು ಆಸ್ತಿಯನ್ನು ಒತ್ತೆ ಇಟ್ಟು ಅದನ್ನು ಕಳೆದುಕೊಂಡವರ ಸಾಲವನ್ನು ಮನ್ನಾ ಮಾಡಲು ಬ್ಯಾಂಕ್ ನಿರ್ವಹಣೆ ನಿರ್ಧರಿಸಿ’ ಎಂದು ಬ್ಯಾಂಕ್ ಹೇಳಿದೆ.
ಕೇರಳ ಬ್ಯಾಂಕ್ ಈಗಾಗಲೇ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹50 ಲಕ್ಷ ಹಣವನ್ನು ವರ್ಗಾಯಿಸಿದೆ. ಇದಲ್ಲದೆ ಬ್ಯಾಂಕ್‌ನ ಉದ್ಯೋಗಿಗಳು ತಮ್ಮ ಐದು ದಿನದ ವೇತನವನ್ನು ಸಿಎಂ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ.
ಜುಲೈ 30ರಂದು ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಚೂರಲ್‌ಮಲ, ಮುಂಡಕ್ಕೈ ಸೇರಿ ಹಲವು ಗ್ರಾಮಗಳು ನಾಶವಾಗಿವೆ. ಈವರೆಗೆ 230 ಜನರ ಮೃತದೇಹಗಳ ದೊರಕಿದ್ದು, ಚಾಲಿಯಾರ್ ನದಿ ತಟದಲ್ಲಿ ನಾಪತ್ತೆಯಾದವರ ಮೃತದೇಹಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.