ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ, ಸಚಿವರಿಗೆ ನಾಚಿಕೆಯೇ ಇಲ್ಲ: ಕೇರಳ ರಾಜ್ಯಪಾಲ

Published 13 ಡಿಸೆಂಬರ್ 2023, 16:13 IST
Last Updated 13 ಡಿಸೆಂಬರ್ 2023, 16:13 IST
ಅಕ್ಷರ ಗಾತ್ರ

ನವದೆಹಲಿ/ ತಿರುವನಂತಪುರ: ‘ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮತ್ತು ಅವರ ಸಂಪುಟಕ್ಕೆ ನಾಚಿಕೆಯೇ ಇಲ್ಲ’ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್  ಬುಧವಾರ ವಾಗ್ದಾಳಿ ನಡೆಸಿದರು.

ರಾಜ್ಯದ ಕೆಲವು ವಿಶ್ವವಿದ್ಯಾಲಯಗಳ ಸೆನೆಟ್‌ಗಳಿಗೆ ರಾಜ್ಯ‍ಪಾಲರು ನಾಮನಿರ್ದೇಶನ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರು ಟೀಕೆ ಮಾಡಿದ್ದರು.

ಇನ್ನು ಉಲ್ಲೇಖಿಸಿರುವ ರಾಜ್ಯಪಾಲರು, ‘ಸೆನೆಟ್‌ಗಳಿಗೆ ಯಾರನ್ನು ನೇಮಕ ಮಾಡುತ್ತೇನೆ ಎಂಬ ಬಗ್ಗೆ ಅವರಿಗೇಕೆ ಚಿಂತೆ? ರಾಜ್ಯದ ಹಣಕಾಸು ಸಚಿವರು ನನ್ನ ಬಳಿ ಬಂದು ‘ಇವರನ್ನು’ ನಾಮನಿರ್ದೇಶನ ಮಾಡಿ ಎಂದು ಮನವಿ ಮಾಡುತ್ತಾರೆ. ಮುಖ್ಯಮಂತ್ರಿಗೆ ಮತ್ತು ಸಚಿವರಿಗೆ ನಾಚಿಕೆಯೇ ಇಲ್ಲ’ ಎಂದು ಕಿಡಿಕಾರಿದರು.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಲಪತಿಗಳು ಶಿಫಾರಸು ಮಾಡಿ ಕಳುಹಿಸಿದ ಪಟ್ಟಿಗೂ, ನಾನು ನಾಮನಿರ್ದೇಶನ ಮಾಡಿರುವುದಕ್ಕೂ ವ್ಯತ್ಯಾಸವಿದೆ ಎಂದು ಇವರಿಗೆ (ಸಿಎಂ, ಸಚಿವರು) ಹೇಗೆ ಗೊತ್ತು? ನನಗೆ ಶಿಫಾರಸು ಮಾಡುವಂತೆ ಕೆಲವು ಹೆಸರುಗಳನ್ನು ಒಳಗೊಂಡ ಪಟ್ಟಿಯನ್ನು ಅವರು ಕುಲಪತಿಗೆ ಕಳುಹಿಸಿದ್ದರು’ ಎಂದು ಆರೋಪಿಸಿದರು. 

ಸಿಎಂ ಮತ್ತು ಸಚಿವರು ಶಿಫಾರಸು ಮಾಡಿದ್ದ ಹೆಸರುಗಳನ್ನೇ ಕುಲಪತಿಗಳು ನನಗೆ ಕಳುಹಿಸಿದ್ದಾರೆಯೇ ಎಂಬ ಬಗ್ಗೆ ತನಿಖೆಗೆ ಆದೇಶಿಸಿದ್ದೇನೆ. ಅಕ್ರಮ ನಡೆದಿದ್ದರೆ  ಕುಲಪತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

‘ಇವರನ್ನೇ’ ನಾಮನಿರ್ದೇಶನ  ಮಾಡಿ ಎಂದು ಯಾರೂ ನನ್ನನ್ನು ಬಲವಂತ ಮಾಡುವಂತಿಲ್ಲ. ನನಗೆ ಆ ಅಧಿಕಾರ ಇದ್ದಲ್ಲಿ ವಿವೇಚನೆಯಿಂದ ಅದನ್ನು ಬಳಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT