ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇರಳ: ಸರ್ಕಾರಿ ಆಸ್ಪತ್ರೆಯಲ್ಲಿ ಚಿತ್ರೀಕರಣಕ್ಕೆ ನಿಷೇಧಿಸಲು ಸೂಚನೆ

Published : 8 ಸೆಪ್ಟೆಂಬರ್ 2024, 14:47 IST
Last Updated : 8 ಸೆಪ್ಟೆಂಬರ್ 2024, 14:47 IST
ಫಾಲೋ ಮಾಡಿ
Comments

ಕೊಚ್ಚಿ: ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಸಿನಿಮಾ ಚಿತ್ರೀಕರಣ ನಡೆಸುವುದಕ್ಕೆ ಸಂಪೂರ್ಣ ನಿಷೇಧ ಹೇರುವಂತೆ ರಾಜ್ಯ ಸರ್ಕಾರಕ್ಕೆ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವು ಭಾನುವಾರ ಸೂಚನೆ ನೀಡಿದೆ.

ಎರ್ನಾಕುಲಂನ ಅಂಕಮಾಲಿ ತಾಲ್ಲೂಕು ಆಸ್ಪತ್ರೆಯಲ್ಲಿ ಜೂನ್‌ ತಿಂಗಳಲ್ಲಿ ಎರಡು ದಿನಗಳ ಕಾಲ ನಟ ಫಹದ್‌ ಫಾಸಿಲ್‌ ಅವರು ನಿರ್ಮಿಸಿ, ನಟಿಸಿರುವ ‘ಪೈಂಗಿಳಿ’ ಚಿತ್ರದ ಚಿತ್ರೀಕರಣ ನಡೆದಿತ್ತು. ಈ ವೇಳೆ ರೋಗಿಗಳಿಗೆ ಅನನುಕೂಲವಾಗಿದೆ ಎಂದು ದೂರುಗಳು ಕೇಳಿಬಂದಿದ್ದವು. ಈ ಬಗೆಗಿನ ಮಾಧ್ಯಮಗಳ ವರದಿಯನ್ನು ಆಧರಿಸಿ ಆಯೋಗವು ಜುಲೈ 28ರಂದು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು.

ಈ ಹಿನ್ನೆಲೆಯಲ್ಲಿ ಆಯೋಗವು ಈ ಸೂಚನೆ ನೀಡಿದೆ. ಇಂಥ ಘಟನೆಗಳು ಮತ್ತೊಮ್ಮೆ ನಡೆಯದಂತೆ ತಾಲ್ಲೂಕು ಆಸ್ಪತ್ರೆಯ ಅಧೀಕ್ಷಕರಿಗೆ ಆಯೋಗ ಎಚ್ಚರಿಕೆ ನೀಡಿದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳ ಅಧೀಕ್ಷಕರಿಗೂ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಿ ಎಂದು ಆರೋಗ್ಯ ಇಲಾಖೆಯ ನಿರ್ದೇಶಕರಿಗೂ ಆಯೋಗ ಸೂಚಿಸಿದೆ.

ಆಯೋಗದ ಆರೋಪಗಳು?

* ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಚಿತ್ರೀಕರಣ ನಡೆದಿದೆ. ನಟರೂ ಸೇರಿದಂತೆ ಚಿತ್ರತಂಡದ ಸುಮಾರು 50 ಜನರು ಈ ವೇಳೆ ಹಾಜರಿದ್ದರು. ವೈದ್ಯರು ರೋಗಿಗಳಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದ ವೇಳೆಯೂ ಚಿತ್ರೀಕರಣ ನಡೆದ್ದು ಘಟಕದ ಬೆಳಕನ್ನು ಚಿತ್ರೀಕರಣಕ್ಕೆ ಅನುನೂಲವಾಗುವ ಹಾಗೆ ಬಳಸಿಕೊಂಡಿದ್ದರು

* ಗಂಭೀರ ಸ್ಥಿತಿಯಲ್ಲಿದ್ದ ರೋಗಿಯು ತುರ್ತು ನಿಗಾ ಘಟಕಕ್ಕೆ ದಾಖಲಾಗಲು ಸಾಧ್ಯವಾಗಿಲ್ಲ. ಘಟಕದ ಮುಖ್ಯ ದ್ವಾರದಿಂದ ಪ್ರವೇಶ ನಿರಾಕರಿಸಲಾಗಿತ್ತು

* ಸರ್ಕಾರಿ ಆಸ್ಪತ್ರೆಯಲ್ಲಿ ಚಿತ್ರೀಕರಣ ನಡೆಸಿ ಸಿನಿಮಾದಲ್ಲಿ ಆ ಆಸ್ಪತ್ರೆಯನ್ನು ಖಾಸಗಿ ಆಸ್ಪತ್ರೆ ಎಂದು ತೋರಿಸಲಾಗಿದೆ

ಜನರ ಸೇವೆಗಾಗಿ ಆಸ್ಪತ್ರೆಗಳಿವೆ. ಇಂಥ ಸ್ಥಳಗಳಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡುವುದು ಎಂದರೆ ವೈದ್ಯರಾಗಿ ತೆಗೆದುಕೊಂಡ ಪ್ರಮಾಣ ವಚನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದಾಗಿದೆ.
ಕೇರಳ ಮಾನವ ಹಕ್ಕುಗಳ ಆಯೋಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT