ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಚ್ಚಿ ವಾಟರ್‌ ಮೆಟ್ರೊ ವಾಣಿಜ್ಯ ಕಾರ್ಯಾಚರಣೆ ಆರಂಭ

Published 26 ಏಪ್ರಿಲ್ 2023, 14:26 IST
Last Updated 26 ಏಪ್ರಿಲ್ 2023, 14:26 IST
ಅಕ್ಷರ ಗಾತ್ರ

ಕೊಚ್ಚಿ: ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿರುವ ದೇಶದ ಮೊದಲ ವಾಟರ್‌ ಮೆಟ್ರೊ ಬುಧವಾರ ಇಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಕೊಚ್ಚಿ ವಾಟರ್‌ ಮೆಟ್ರೊ’ಗೆ ₹1,136 ಕೋಟಿ ವೆಚ್ಚ ಮಾಡಲಾಗಿದೆ. ಕೊಚ್ಚಿ ಹಾಗೂ ಸುತ್ತಮುತ್ತ ಇರುವ 10 ದ್ವೀಪಗಳಿಗೆ 78 ಎಲೆಕ್ಟ್ರಿಕಲ್ ದೋಣಿಗಳ ಮೂಲಕ ಸಂಪರ್ಕ ಕಲ್ಪಿಸುವ ಈ ವ್ಯವಸ್ಥೆಯು 38 ಟರ್ಮಿನಲ್‌ಗಳನ್ನು ಹೊಂದಿದೆ.‌

ಸದ್ಯ ವಿದ್ಯುತ್‌ಚಾಲಿತ ಹವಾನಿಯಂತ್ರಿತ 15 ದೋಣಿಗಳು ಎಂಟು ಜಲಮಾರ್ಗಗಳ ಮೂಲಕ ಕಾರ್ಯಾಚರಣೆ ಆರಂಭಿಸಿವೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

‘ವಾಟರ್‌ ಮೆಟ್ರೊ ಸೇವೆಯು ಸುರಕ್ಷಿತ ಮತ್ತು ಜನರಿಗೆ ಕೈಗೆಟಕುವ ದರದಲ್ಲಿ ಲಭ್ಯವಿದೆ. ವಿಶ್ವದ ವಿವಿಧೆಡೆಯಿಂದ ಬರುವ ಪ್ರವಾಸಿಗರನ್ನೂ ಇದು ಆಕರ್ಷಿಸಲಿದೆ’ ಎಂದು ಕೇರಳ ವಾಟರ್‌ ಮೆಟ್ರೊ ಲಿಮಿಟೆಡ್‌ ಪ್ರಕಟಣೆಯಲ್ಲಿ ತಿಳಿಸಿದೆ.

‘ಪರಿಸರಸ್ನೇಹಿ ದೋಣಿಗಳಲ್ಲಿ 100 ಜನರಿಗೆ ಪ್ರಯಾಣಿಸಬಹುದಾಗಿದೆ. ಲೈಫ್‌ ಜಾಕೆಟ್‌ ಸೇರಿದಂತೆ ಜೀವ ರಕ್ಷಕ ಸಲಕರಣೆಗಳು ಬೋಟ್‌ಗಳಲ್ಲಿವೆ’ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT