ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2024ರಲ್ಲೂ ಇದೇ ಉತ್ಸಾಹದೊಂದಿಗೆ ಮುನ್ನುಗ್ಗೋಣ: ಪ್ರಧಾನಿ ನರೇಂದ್ರ ಮೋದಿ

Published 31 ಡಿಸೆಂಬರ್ 2023, 10:05 IST
Last Updated 31 ಡಿಸೆಂಬರ್ 2023, 10:05 IST
ಅಕ್ಷರ ಗಾತ್ರ

ನವದೆಹಲಿ: ‘ವಿಕಸಿತ ಭಾರತ’ ಕಾರ್ಯಕ್ರಮ ಸೇರಿದಂತೆ ದೇಶವು ಅಭಿವೃದ್ದಿಯತ್ತ ಸಾಗುತ್ತಿದೆ. ಸ್ವಾವಲಂಬನೆ ಮನೋಭಾವದಿಂದ ಮುನ್ನಡೆಯುತ್ತಿರುವ ಭಾರತ, ಇದೇ ಉತ್ಸಾಹವನ್ನು 2024ರಲ್ಲಿಯೂ ಮುಂದುವರಿಸಿಕೊಂಡು ಹೋಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

2023ರ ತಮ್ಮ ಕೊನೆಯ ಮನ್ ಕಿ ಬಾತ್ (108ನೇ ಸಂಚಿಕೆ) ಭಾಷಣದಲ್ಲಿ ಅವರು ಮಾತನಾಡಿದರು.

ದೇಶವು ‘ನಾವೀನ್ಯತೆಯ ಕೇಂದ್ರ ಬಿಂದುವಾಗಿ ಹೊರಹೊಮ್ಮುತ್ತಿದೆ. ಇದು ಹೊಸತವನ್ನು ಅನ್ವೇಷಿಸುತ್ತಿರುವ ಭಾರತವನ್ನು ಸಂಕೇತಿಸುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಒತ್ತು ನೀಡಬೇಕು. ಈ ಮೂಲಕ ‘ಫಿಟ್‌ ಇಂಡಿಯಾ’ ಕಾರ್ಯಕ್ರಮವನ್ನು ಯಶಸ್ವಿಗೊಳ್ಳಿಸಬೇಕು’ ಎಂದು ಮೋದಿ ತಿಳಿಸಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ಸೇರಿದಂತೆ ಭಾರತವು ಈ ವರ್ಷ ಹಲವು ಸಾಧನೆಗಳನ್ನು ಮಾಡಿದೆ ಎಂದು ಉಲ್ಲೇಖಿಸಿದರು.

ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್, ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು, ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಸೇರಿದಂತೆ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಅವರು ತಮ್ಮ ಫಿಟ್‌ನೆಸ್‌ ಸಲಹೆಗಳನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT