ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Election Results 2024 | ಕೇರಳ: ಖಾತೆ ತೆರೆದ ಬಿಜೆಪಿ

Published 4 ಜೂನ್ 2024, 23:33 IST
Last Updated 4 ಜೂನ್ 2024, 23:33 IST
ಅಕ್ಷರ ಗಾತ್ರ

‘ದೇವರ ನಾಡು’ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರೊಂದಿಗೆ ‘ಇಂಡಿಯಾ’ ಕೂಟಕ್ಕೆ ಶಕ್ತಿ ತುಂಬಿದೆ. ಆದರೆ, ಎಡಪಕ್ಷಗಳ ಪ್ರಾಬಲ್ಯವಿರುವ ರಾಜ್ಯದಲ್ಲಿ ಅಸ್ತಿತ್ವವನ್ನು ಸ್ಥಾಪಿಸಬೇಕು ಎನ್ನುವ ಬಿಜೆಪಿಯ ದಶಕಗಳ ಕನಸು ಈ ಬಾರಿ ಈಡೇರಿದೆ.

ರಾಜ್ಯದಲ್ಲಿ ಒಟ್ಟು 20 ಲೋಕಸಭಾ ಕ್ಷೇತ್ರಗಳಿವೆ. ಈ ಪೈಕಿ ಯುಡಿಎಫ್‌ 18 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಅವುಗಳ ಪೈಕಿ ಕಾಂಗ್ರೆಸ್ 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಅದರ ಮಿತ್ರಪಕ್ಷಗಳಾದ ಐಯುಎಂಎಲ್‌ 2 ಸ್ಥಾನಗಳಲ್ಲಿ, ಆರ್‌ಎಸ್‌ಪಿ ಮತ್ತು ಕೆಇಸಿ ತಲಾ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿವೆ.      

ರಾಜ್ಯದಲ್ಲಿ ಈ ಬಾರಿ ಅತ್ಯಂತ ಅಚ್ಚರಿಯ ಫಲಿತಾಂಶ ಎಂದರೆ, ಅದು ತ್ರಿಶೂರ್ ಕ್ಷೇತ್ರದ್ದು. ಈ ಕ್ಷೇತ್ರದಿಂದ ನಟ ಸುರೇಶ್ ಗೋಪಿ ಜಯಗಳಿಸಿದ್ದು, ಕೇರಳದಲ್ಲಿ ಬಿಜೆಪಿ ಶಕೆ ಆರಂಭವಾಗಿದೆ. ಇನ್ನೊಂದೆಡೆ ಎಡಪಕ್ಷಗಳ ಕೂಟ ಎಲ್‌ಡಿಎಫ್‌ ಕೇವಲ ಒಂದು ಕ್ಷೇತ್ರದಲ್ಲಿ (ಆಲತ್ತೂರ್) ಗೆಲ್ಲುವುದರ ಮೂಲಕ ತನ್ನ ಅಸ್ತಿತ್ವ ಉಳಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT