ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ | ಮರಾಠ ಪ್ರತಿಭಟನೆ: ಸಂಚಾರಕ್ಕೆ ಅಡ್ಡಿ

Published 26 ಜನವರಿ 2024, 14:27 IST
Last Updated 26 ಜನವರಿ 2024, 14:27 IST
ಅಕ್ಷರ ಗಾತ್ರ

ಮುಂಬೈ: ದಕ್ಷಿಣ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌ನ (ಸಿಎಸ್‌ಎಂಟಿ) ಬಳಿ ನೂರಕ್ಕೂ ಹೆಚ್ಚು ಮರಾಠ ಪ್ರತಿಭಟನಕಾರರು ಶುಕ್ರವಾರ ಪ್ರತಿಭಟಿಸಿದರು. ಇದರಿಂದ ಸಂಚಾರಕ್ಕೆ ಅಡ್ಡಿಯುಂಟಾಯಿತು.

ಆಜಾದ್‌ ಮೈದಾನಕ್ಕೆ ತೆರಳುತ್ತಿದ್ದ ಪ್ರತಿಭಟನಕಾರರು, ಸಿಎಸ್‌ಎಂಟಿ ಮತ್ತು ಬೃಹತ್‌ ಮುಂಬೈ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ  ಬಳಿಯ ಕೂಡುರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದರು. ಇದರಿಂದ ಕೆಲಹೊತ್ತು ಸಂಚಾರಕ್ಕೆ ಅಡ್ಡಿಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಾಹ್ನದ ಬಳಿಕ ಮಹಾನಗರ ಪಾಲಿಕೆ ಮಾರ್ಗ ಹಾಗೂ ಡಿ.ಎನ್.ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಿದ ಅಧಿಕಾರಿಗಳು, ಬಸ್‌ಗಳ ಸಂಚಾರಕ್ಕೆ ಬದಲಿ ಮಾರ್ಗ ಕಲ್ಪಿಸಿದರು.

ಮರಾಠ ಮೀಸಲಾತಿಗಾಗಿ ಒತ್ತಾಯಿಸಿ ಮನೋಜ್ ಜಾರಾಂಗೆ ನೇತೃತ್ವದಲ್ಲಿ ಹೋರಾಟ ನಡೆದಿದ್ದು, ಅಪಾರ ಸಂಖ್ಯೆಯ ಪ್ರತಿಭಟನಕಾರರು ನವಿ ಮುಂಬೈನಲ್ಲಿ ಜಮಾಯಿಸಿದ್ದರು. ಹೋರಾಟಗಾರರು ಮುಂಬೈ ಪ್ರವೇಶಿಸದಂತೆ ಸರ್ಕಾರವು ಮನವೊಲಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT