ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020–21ನೇ ಸಾಲಿನ ಎಂಬಿಬಿಎಸ್‌ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ

Published 11 ಡಿಸೆಂಬರ್ 2023, 15:19 IST
Last Updated 11 ಡಿಸೆಂಬರ್ 2023, 15:19 IST
ಅಕ್ಷರ ಗಾತ್ರ

ನವದೆಹಲಿ: 2020–21ನೇ ಶೈಕ್ಷಣಿಕ ವರ್ಷದಲ್ಲಿ ಎಂಬಿಬಿಎಸ್‌ ಪದವಿ ಕೋರ್ಸ್‌ಗೆ ಪ್ರವೇಶ ಪಡೆದಿದ್ದು, ತೇರ್ಗಡೆಗೊಳ್ಳದ ಅಭ್ಯರ್ಥಿಗಳಿಗೆ ಇನ್ನೊಂದು ಅವಕಾಶ ನೀಡಲು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ತೀರ್ಮಾನಿಸಿದೆ.

‘ಆ ಶೈಕ್ಷಣಿಕ ವರ್ಷದ ಅನುತ್ತೀರ್ಣ ಅಭ್ಯರ್ಥಿಗಳಿಗೆ ಅನ್ವಯಿಸಿ ಇನ್ನೊಂದು ಅವಕಾಶ (5ನೇ ಯತ್ನ) ನೀಡಲಾಗುವುದು. ಆ ವರ್ಷದ ಅಭ್ಯರ್ಥಿಗಳ ಶೈಕ್ಷಣಿಕ ವರ್ಷದ ಕಲಿಕೆಯು ಕೋವಿಡ್‌ ಕಾರಣದಿಂದ ಬಾಧಿತವಾಗಿತ್ತು’ ಎಂದು ಎನ್‌ಎಂಸಿ ಹೇಳಿಕೆಯಲ್ಲಿ ತಿಳಿಸಿದೆ.

‘ಇದು, ಒಂದು ಬಾರಿಯ ಅವಕಾಶ ಮಾತ್ರ. ಭವಿಷ್ಯದಲ್ಲಿನ ಯಾವುದೇ ಕ್ರಮಗಳಿಗೆ ನಿದರ್ಶನವಾಗಿ ಪರಿಗಣಿಸಲಾಗದು’ ಎಂದು ಆಯೋಗವು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT