ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಜಿಒಗಳ ಎಫ್‌ಸಿಆರ್‌ಎ ನೋಂದಣಿಯ ಸಿಂಧುತ್ವ ಮಾರ್ಚ್‌ವರೆಗೆ ವಿಸ್ತರಣೆ

Last Updated 31 ಡಿಸೆಂಬರ್ 2021, 14:32 IST
ಅಕ್ಷರ ಗಾತ್ರ

ನವದೆಹಲಿ: ಮದರ್ ಥೆರೆಸಾ ಅವರು ಸ್ಥಾಪಿಸಿದ ಮಿಷನರೀಸ್ ಆಫ್ ಚಾರಿಟಿಯ (ಎಂಒಸಿ) ಅರ್ಜಿಯನ್ನು ತಿರಸ್ಕರಿಸಿದ ಕೆಲವು ದಿನಗಳ ಬಳಿಕ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ವಿದೇಶಿ ದೇಣಿಗೆ ಸಂಗ್ರಹಿಸಲು ಎನ್‌ಜಿಒಗಳ ಪರವಾನಗಿಯ ಮಾನ್ಯತೆಯನ್ನು 2022ರ ಮಾರ್ಚ್ 31ರವರೆಗೆ ವಿಸ್ತರಿಸಿ ಶುಕ್ರವಾರ ಆದೇಶ ಹೊರಡಿಸಿದೆ.

‘ವಿವಿಧ ಎನ್‌ಜಿಒಗಳ ಸುಮಾರು 15 ಸಾವಿರ ಅರ್ಜಿಗಳು ಬಾಕಿ ಉಳಿದಿದ್ದು, ನವೀಕರಣ ಅರ್ಜಿಗಳು ಬಾಕಿ ಉಳಿದಿರುವ ಎನ್‌ಜಿಒಗಳು ಮಾತ್ರ ವಿಸ್ತರಣೆಯ ಪ್ರಯೋಜನಗಳನ್ನು ಪಡೆಯಬಹುದು. ಆದರೆ, ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ (ಎಫ್‌ಸಿಆರ್‌ಎ) ನೋಂದಣಿಯ ನವೀಕರಣಕ್ಕಾಗಿ ಅವರ ಅರ್ಜಿಗಳನ್ನು ಈಗಾಗಲೇ ತಿರಸ್ಕರಿಸಿರುವುದರಿಂದ ಎಂಒಸಿಯಂತಹ ಸಂಸ್ಥೆಗಳು ಅರ್ಹತೆ ಹೊಂದಿರುವುದಿಲ್ಲ’ ಎಂದೂ ಸಚಿವಾಲಯವು ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಈ ಬಗ್ಗೆ ಹೊರಡಿಸಿರುವ ಸಾರ್ವಜನಿಕ ಸೂಚನೆಯ ಪ್ರಕಾರ, ‘ಸಾರ್ವಜನಿಕ ಹಿತಾಸಕ್ತಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಎನ್‌ಜಿಒಗಳ ಎಫ್‌ಸಿಆರ್‌ಎ ನೋಂದಣಿ ಪ್ರಮಾಣಪತ್ರಗಳ ಮಾನ್ಯತೆಯನ್ನು 2022ರ ಮಾರ್ಚ್ 31ರವರೆಗೆ ಅಥವಾ ನವೀಕರಣ ಅರ್ಜಿಗಳ ವಿಲೇವಾರಿ ದಿನಾಂಕದವರೆಗೆ ಇವುಗಳಲ್ಲಿ ಯಾವುದು ಮೊದಲು ಮಾನದಂಡಗಳನ್ನು ಪೂರೈಸುತ್ತದೆಯೋ ಅವುಗಳ ಪರವಾನಗಿ ಮಾನ್ಯತೆ ವಿಸ್ತರಣೆಯಾಗುತ್ತದೆ’ ಎಂದು ಗೃಹಸಚಿವಾಲಯವು ತಿಳಿಸಿದೆ.

ಎಫ್‌ಸಿಆರ್‌ಎ ನೋಂದಣಿ ಪ್ರಮಾಣಪತ್ರಗಳನ್ನು ಹೊಂದಿರುವ ಎನ್‌ಜಿಒಗಳ ಮಾನ್ಯತೆಯು 2020ರ ಸೆ. 29ರಿಂದ 2022ರ ಮಾರ್ಚ್ 31ರ ನಡುವೆ ಮುಕ್ತಾಯಗೊಳ್ಳುತ್ತವೆ. ವಿದೇಶಿ ದೇಣಿಗೆ (ನಿಯಂತ್ರಣ) ನಿಯಮಗಳು, 2011ರ ನಿಯಮ 12 ರ ಪ್ರಕಾರ ಪ್ರಮಾಣಪತ್ರಗಳ ಅವಧಿ ಮುಗಿಯುವ ಮೊದಲು ಎಫ್‌ಸಿಆರ್‌ಎ ಪೋರ್ಟಲ್‌ನಲ್ಲಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿರುವ ಎನ್‌ಜಿಒಗಳು ಈ ಪ್ರಯೋಜನ ಪಡೆಯಲು ಅರ್ಹವಾಗಿರುತ್ತವೆ.

ಎಫ್‌ಸಿಆರ್‌ಎ ಅಡಿಯಲ್ಲಿ ಒಟ್ಟು 22,762 ಎನ್‌ಜಿಒಗಳನ್ನು ನೋಂದಾಯಿಸಲಾಗಿದೆ ಮತ್ತು ಇದುವರೆಗೆ ಸುಮಾರು 6,500 ನವೀಕರಣ ಅರ್ಜಿಗಳನ್ನು ಪ್ರಕ್ರಿಯೆಗೆ ಒಳಪಡಿಸಲಾಗಿದೆ ಎಂದು ಗೃಹಸಚಿವಾಲಯವು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT