ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರಕ್ಕೆ ನಾಳೆ ಅಪ್ಪಳಿಸಲಿದೆ ಮಿಚಾಂಗ್‌: ಭಾರಿ ಮಳೆ, ಭೂಕುಸಿತದ ಆತಂಕ

Published 4 ಡಿಸೆಂಬರ್ 2023, 13:43 IST
Last Updated 4 ಡಿಸೆಂಬರ್ 2023, 13:43 IST
ಅಕ್ಷರ ಗಾತ್ರ

ಅಮರಾವತಿ: ಬಂಗಾಳಕೊಲ್ಲಿಯಲ್ಲಿ ಸುತ್ತುತ್ತಿರುವ ಮಿಚಾಂಗ್‌ ಚಂಡಮಾರುತವು ಆಂಧ್ರ ಕರಾವಳಿಯತ್ತ ಸಾಗುತ್ತಿದ್ದು, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.

ಚಂಡಮಾರುತದ ಪ್ರಭಾವದಿಂದ ಇಂದಿನಿಂದಲೇ (ಸೋಮವಾರ) ಆಂಧ್ರಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಕರಾವಳಿ ಸಮೀಪವಿರುವ ಎಂಟು ಜಿಲ್ಲೆಗಳಿಗೆ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.

ಆಂಧ್ರ ಮುಖ್ಯಮಂತ್ರಿ ವೈ. ಎಸ್‌. ಜಗನ್‌ ಮೋಹನ್‌ ರೆಡ್ಡಿ ಅವರು ಪೂರ್ವಬಾವಿ ಸಭೆ ನಡೆಸಿದ್ದು, ಚಂಡಮಾರುತವನ್ನು ಎದುರಿಸಲು ಕೈಗೊಳ್ಳುವ ಕ್ರಮಗಳ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ತಿರುಪತಿ, ನೆಲ್ಲೂರು, ಪಶ್ಚಿಮ ಗೋದಾವರಿ, ಕಾಕಿನಾಡ ಸೇರಿದಂತೆ ಹಲವು ಜಿಲ್ಲೆಗಳಿಗೆ ಎಚ್ಚರಿಕೆ ನೀಡಿಲಾಗಿದೆ.

ಮಂಗಳವಾರದ ಹೊತ್ತಿಗೆ ಗಂಟೆಗೆ 100–110 ಕಿ. ಮೀನಷ್ಟು ವೇಗದಲ್ಲಿ ಗಾಳಿ ಬೀಸಲಿದ್ದು, ಬಾಪಟ್ಲಾ ಜಿಲ್ಲೆಯಲ್ಲಿ ಭೂಕುಸಿತವಾಗುವ ಸಾಧ್ಯತೆ ಇದೆ ಎಂದು ಮುಖ್ಯಂಮತ್ರಿಗಳ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. 

ಇದೇ ರೀತಿಯ ವಾತಾವರಣ ಡಿ.7ರವರೆಗೂ ಮುಂದುವರಿಯುವ ಸಾಧ್ಯತೆ ಇದೆ, ಬಳಿಕ ಚಂಡಮಾರುತ ದುರ್ಬಲವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚೆನ್ನೈನಲ್ಲಿ ಪ್ರವಾಹ ಸ್ಥಿತಿ: ‌

ಉತ್ತರ ತಮಿಳುನಾಡಿನ ಚೆನ್ನೈ, ಚೆಂಗಲಪಟ್ಟು, ಕಾಂಚೀಪುರಂ ತಿರುವಲ್ಲೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. 

ವರದಿಯ ಪ್ರಕಾರ ಚೆಂಗಲಪಟ್ಟುವಿನಲ್ಲಿ ಮಳೆ ಸಂಬಂಧಿ ಅವಘಡದಿಂದ  ಇಬ್ಬರು ಮೃತಪಟ್ಟಿದ್ದಾರೆ. ಚೆನ್ನೈನ ವಿಮಾನ ನಿಲ್ದಾಣ ಸೇರಿ ಬಹುತೇಕ ಭಾಗಗಳು ಜಲಾವೃತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT