ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಿಚಾಂಗ್‌’ ಎಫೆಕ್ಟ್‌: ಚೆನ್ನೈನಿಂದ ಬೆಂಗಳೂರಿಗೆ 33 ವಿಮಾನಗಳ ಮಾರ್ಗ ಬದಲಾವಣೆ

Published 4 ಡಿಸೆಂಬರ್ 2023, 9:44 IST
Last Updated 4 ಡಿಸೆಂಬರ್ 2023, 9:44 IST
ಅಕ್ಷರ ಗಾತ್ರ

ಚೆನ್ನೈ‌‌\ ಬೆಂಗಳೂರು: ಮಿಚಾಂಗ್‌ ಚಂಡಮಾರುತದ ಪರಿಣಾಮ ತಮಿಳುನಾಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಚೆನ್ನೈನಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ 33 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದೇಶೀಯ ಹಾಗೂ ಅಂತರಾಷ್ಟ್ರೀಯ ವಿಮಾನಗಳೆರಡೂ ಹಾರಾಟ ನಡೆಸುವ ಕಾರಣ ಇಂಡಿಗೋ, ಸ್ಪೈಸ್‌ಜೆಟ್‌, ಗಲ್ಫ್‌ ಏರ್‌ ಸೇರಿದಂತೆ ದೇಶಿಯ ಮತ್ತು ಅಂತರರಾಷ್ಟ್ರೀಯ ವಿಮಾನಗಳ ಮಾರ್ಗ ಬದಲಾವಣೆ ಮಾಡಿ ಬೆಂಗಳೂರಿನಲ್ಲಿ ಲ್ಯಾಂಡಿಂಗ್‌ ಆಗುವಂತೆ ಮಾಡಲಾಗಿದೆ. ಅಲ್ಲದೆ ಹಲವು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಚೆನ್ನೈ ವಿಮಾನ ನಿಲ್ದಾಣ ಸೋಮವಾರ ರಾತ್ರಿ 11 ಗಂಟೆಯವರೆಗೆ ಮುಚ್ಚಿರಲಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ 70 ಕ್ಕೂ ಹೆಚ್ಚು ಲ್ಯಾಂಡ್‌ ಆಗುವ ಹಾಗೂ ಚೆನ್ನೈನಿಂದ ಹೊರಡುವ ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಚೆನ್ನೈ ಮಾತ್ರವಲ್ಲದೆ ತಿರುಪತಿ, ವಿಶಾಖಪಟ್ಟಣದಲ್ಲೂ ಪ್ರತಿಕೂಲ ಹವಾಮಾನ ಇರುವ ಕಾರಣ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT